ಕೌಕ್ರಾಡಿ: ಆಲಂಪಾಡಿ ನಿವಾಸಿ ಅಶ್ರಫ್ ಆತ್ಮಹತ್ಯೆ

0

ನೆಲ್ಯಾಡಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಅಶ್ರಫ್(30 ವ.) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.2ರಂದು ಸಂಜೆ ನಡೆದಿದೆ.
ಅಶ್ರಫ್ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಶ್ರಫ್‌ನ ಮೊದಲ ಪತ್ನಿ ತವರು ಮನೆಗೆ ಹೋಗಿದ್ದು ಎರಡನೇ ಪತ್ನಿ, ಅಶ್ರಫ್‌ನ ತಂದೆ, ತಾಯಿ, ಹಾಗೂ ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು. ಅಶ್ರಫ್ ಕಳೆದ ಕೆಲ ಸಮಯಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಇದರಿಂದ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗಿದೆ. ಎ.2ರಂದು ಸಂಜೆ ಮನೆಯ ಸಿಟೌಟ್‌ನಲ್ಲಿದ್ದ ಕಬ್ಬಿಣದ ಪೈಪುಗೆ ಅಂಗಿಯ ಒಂದು ಬದಿಯನ್ನು ಕಟ್ಟಿ ಅದರ ಇನ್ನೊಂದು ಬದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಶ್ರಫ್‌ನ ತಂದೆ ಖಾಸೀಂ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅಶ್ರಫ್ ತಂದೆ, ತಾಯಿ, ಇಬ್ಬರು ಪತ್ನಿಯರು ಹಾಗೂ ಆರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here