ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರಿರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪುನಃನಿರ್ಮಾಣ-ವಿಜ್ಞಾಪನಾ ಪತ್ರ ಬಿಡುಗಡೆ

0

ಪುತ್ತೂರು:ದೈವಜ್ಞರ ಚಿಂತನೆಯಿಂದ ಶ್ರೀ ಕ್ಷೇತ್ರದ ಪುನಃನಿರ್ಮಾಣ ಸಮಾಜದಲ್ಲಿನ ಭಕ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿದೆ ಎಂಬ ನಂಬಿಕೆ ಇದೆ. ರಕ್ತೇಶ್ವರಿ, ಚಾಮುಂಡೇಶ್ವರಿ ಸಾನಿಧ್ಯವು ಕಾರಣಿಕದ ಕ್ಷೇತ್ರವಾಗಿದೆ. ಅದರಂತೆ ಭಕ್ತರ ಆಗಮಿಸುವಿಕೆಯ ಸಂಖ್ಯೆ ದಿನದಿಂದ ದಿನ ಹೆಚ್ಚಾಗಿರುವುದೇ ಸಾಕ್ಷಿ ಎಂದು ಶ್ರೀ ಕ್ಷೇತ್ರದ ಪುನಃನಿರ್ಮಾಣದ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾಗಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿರವರು ಹೇಳಿದರು.


ನ.9 ರಂದು ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರಿರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪುನಃನಿರ್ಮಾಣ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ದೇವರು ನಮಗೆ ಯಾವ ಕರ್ತವ್ಯವನ್ನು ನೀಡಿದ್ದಾರೋ ಅದನ್ನು ನಾವು ಶಕ್ತಿ ಮೀರಿ ಮಾಡಿದಾಗ ದೇವರು ಆಶೀರ್ವದಿಸುತ್ತಾನೆ. ದೇವರಲ್ಲಿ ನಮಗೆ ಬೇಕಾದ್ದು ಕೇಳಿದಾಗ ದೇವರು ನಮಗೆ ಅನುಗ್ರಹಿಸುತ್ತಾನೆ ಆದರೆ ದೇವರಿಗೆ ಕೊಡುವ ಸಂದರ್ಭದಲ್ಲಿ ಹಿಂದೇಟು ಹಾಕುವುದು ಸರಿಯಾಗೋಲ್ಲ ಎಂದರು.


ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಕ್ತರು ತನು-ಮನ-ಧನದಿಂದ ಸಹಕರಿಸಿ-ಡಾ.ಸುರೇಶ್ ಪುತ್ತೂರಾಯ:
ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರು ಮಾತನಾಡಿ, ಶ್ರೀ ಕ್ಷೇತ್ರದ ಪುನಃನಿರ್ಮಾಣ ಜೀರ್ಣೋದ್ಧಾರಕ್ಕೆ ಬೇಕಾದ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಭಕ್ತರು ತನು-ಮನ-ಧನದಿಂದ ಸಹಕರಿಸಿ. ಶ್ರೀ ಕ್ಷೇತ್ರದ ಭಕ್ತರ ಉತ್ಸಾಹ ನೋಡಿದಾಗ ಶ್ರೀ ಕ್ಷೇತ್ರದ ನಿರ್ಮಾಣ ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಯುತ್ತದೆ ಎಂಬ ವಿಶ್ವಾಸ, ಭರವಸೆ ನನಗಿದೆ. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್‌ಮೂಲೆ ಹಾಗೂ ಸತೀಶ್ ರೈ ಮಿಶನ್‌ಮೂಲೆ ಸಹೋದರರ ನೇತೃತ್ವದಲ್ಲಿ ಆಡಳಿತ ಸಮಿತಿಯು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಸರ್ವರ ಸಹಕಾರದಿಂದ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದರು.


ಸಂಕಲ್ಪದೊಂದಿಗೆ ಮನಸ್ಸು, ಶ್ರದ್ಧೆ, ಭಕ್ತಿಯಿದ್ದಾಗ ಎಲ್ಲವೂ ಈಡೇರುವುದು-ಶಿವನಾಥ್ ರೈ:
ಜಿಲ್ಲಾ ಧಾರ್ಮಿಕ ಧತ್ತಿ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು ಮಾತನಾಡಿ, ನಾವು ಮಾಡುವ ಕಾರ್ಯದಲ್ಲಿ ಸಂಕಲ್ಪದ ಜೊತೆಗೆ ಮನಸ್ಸು, ಶ್ರದ್ಧೆ ಹಾಗೂ ಭಕ್ತಿ ಇದ್ದಾಗ ಎಲ್ಲವೂ ಈಡೇರುವುದು. ಶ್ರೀ ಕ್ಷೇತ್ರದ ಭಕ್ತಾದಿಗಳು ಪೂರ್ಣಪ್ರಮಾಣದಲ್ಲಿ ಸಹಕಾರ ನೀಡಿದಾಗ ಮುಂದಿನ ಆರು ತಿಂಗಳಲ್ಲಿ ಶ್ರೀ ಕ್ಷೇತ್ರದ ಪುನಃ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ನಡೆಯುವುದು. ಧಾರ್ಮಿಕ ಪರಿಷತ್ತಿಗೆ ಒಳಪಡದ ದೇವಸ್ಥಾನವಾದರೂ ನನ್ನನ್ನು ಇಲ್ಲಿ ಪ್ರೀತಿಯಿಂದ ಕರೆದಿದ್ದಾರೆ ಮಾತ್ರವಲ್ಲ ನನ್ನಿಂದ ನೀಡುವ ಸಹಾಯವನ್ನು ಖಂಡಿತಾ ನೀಡುತ್ತೇನೆ ಎಂದರು.


ಶ್ರೀ ಕ್ಷೇತ್ರದ ದೊಡ್ಡ ಶಕ್ತಿ ಶುಕ್ರವಾರದ ಸಾಮೂಹಿಕ ಭಜನೆ-ಪ್ರೀತಂ ಪುತ್ತೂರಾಯ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಂತ್ರಿವರ್ಯರಾದ ಕುಕ್ಕಾಡಿ ಪ್ರೀತಂ ಪುತ್ತೂರಾಯ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ದೇವಿಯ ಗುಡಿ ಆದ ಮೇಲೆ ಗುಡಿಯಲ್ಲಿ ಮೊದಲಾಗಿ ಪೂಜೆ ಮಾಡಿದ ಶ್ರೇಯ ಶ್ರೀನಿವಾಸ ಪುತ್ತೂರಾಯರವರಿಗೆ ಸಲ್ಲಬೇಕು. ಮನೆ ಯಜಮಾನ ದಂಪತಿ ಸರಿ ಇದ್ರೆ ಆ ಮನೆ ಸರಿ ಇರುತ್ತದೆ. ಅದರಂತೆ ಸಾನಿಧ್ಯದಲ್ಲಿ ಅರ್ಚಕರು ಸರಿಯಿದ್ದಾಗ ಆ ಕ್ಷೇತ್ರದಲ್ಲಿನ ಭಕ್ತರನ್ನು ಪ್ರೀತಿಯಿಂದ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶ್ರೀ ಕ್ಷೇತ್ರದ ದೇವಿಯು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ಮೋಹನ್ ರೈ ಮಿಶನ್‌ಮೂಲೆರವರಿಗೆ ಎಲ್ಲಾ ರೀತಿಯ ಶಕ್ತಿ ಕೊಟ್ಟು ಶ್ರೀ ಕ್ಷೇತ್ರವನ್ನು ಮುನ್ನೆಡೆಸುವಂತೆ ಮಾಡಿದ್ದಾರೆ ಎಂದ ಅವರು ಶ್ರೀ ಕ್ಷೇತ್ರದ ದೊಡ್ಡ ಶಕ್ತಿ ಎಂದರೆ ಅದು ಶುಕ್ರವಾರದ ಸಾಮೂಹಿಕ ಭಜನೆ. ಶ್ರೀ ಕ್ಷೇತ್ರವು ಕೇಳಿ ಕೊಡುವಂತಹ ಕ್ಷೇತ್ರವಲ್ಲ, ಬಂದು ಕೊಡುವಂತಹ ಕ್ಷೇತ್ರವಾಗಿದೆ ಎಂದರು.


ನಿಗದಿತ ಅವಧಿಯೊಳಗೆ ಧಾರ್ಮಿಕ ಕ್ಷೇತ್ರ ಪುನರುತ್ಥಾನಗೊಳ್ಳಲಿ-ಅರುಣ್ ಪುತ್ತಿಲ:
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಪುತ್ತಿಲ ಪರಿವಾರ ಟ್ರಸ್ಟ್ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪ್ರಶ್ನಾಚಿಂತನೆಯಲ್ಲಿ ಮೂಡಿ ಬಂದಂತೆ ಶ್ರೀ ಕ್ಷೇತ್ರದ ದೇವಿಯ ಸಾನಿಧ್ಯ ಜೀರ್ಣೋದ್ಧಾರಗೊಂಡು ಭಕ್ತರಿಗೆ ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ. ಶ್ರೀ ಕ್ಷೇತ್ರದ ಪಾವಿತ್ರ್ಯತೆ ಏನು ಎಂಬುದು ಇಲ್ಲಿ ನೆರೆದ ಭಕ್ತಾಧಿಗಳೇ ಸಾಕ್ಷಿ. ಆಡಳಿತ ಸಮಿತಿಯ ಚಿಂತನೆಯಂತೆ ನಿಗದಿತ ಅವಧಿಯೊಳಗೆ ದೇವಸ್ಥಾನದ ಕಾರ್ಯಗಳು ಪೂರ್ಣಗೊಂಡು ಧಾರ್ಮಿಕ ಕ್ಷೇತ್ರ ಪುನರುತ್ಥಾನಗೊಳ್ಳಲಿ ಎಂದರು.


ಶ್ರದ್ದಾ ಕೇಂದ್ರವಾಗಿರುವ ದೇವರ ಆಲಯದ ಸಂಕಲ್ಪ ಮಾಡೋಣ-ಜಯಂತ್ ನಡುಬೈಲು:
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಮನೆ ಕಟ್ಟಲು ನಾವು ಹೇಗೆ ಒಳ್ಳೆಯ ಸಂಕಲ್ಪ ಮಾಡುತ್ತೇವೆಯೋ ಹಾಗೆಯೇ ಶ್ರದ್ದಾ ಕೇಂದ್ರವಾಗಿರುವ ದೇವರ ಆಲಯ ಕೂಡ. ದೇವರನ್ನು ಒಳ್ಳೆಯ ಜಾಗದಲ್ಲಿ ಕುಳ್ಳಿರಿಸಿ ಭಕ್ತರಿಗೆ ಉತ್ತಮ ಸಾನಿಧ್ಯದ ಸ್ಥಳವನ್ನು ಹೊಂದಲಿ.ನಮ್ಮ ಮುಂದಿನ ಪೀಳಿಗೆಗೆ ಧ್ಯಾನಿಸಲು ಒಳ್ಳೆಯ ದೇವಸ್ಥಾವನ್ನು ನಿರ್ಮಿಸೋಣ. ಪ್ರತಿಯೋರ್ವರು ಶ್ರಮದಾನದ ಮೂಲಕ ಹಾಗೂ ಆರ್ಥಿಕ ಕ್ರೋಢೀಕರಣ ಮಾಡುವುದರಲ್ಲಿ ಒಗ್ಗಟ್ಟಾಗಿ ದುಡಿಯೋಣ ಎಂದರು.


ಜಾತಿ-ಧರ್ಮ ಬದಿಗೊತ್ತಿ ಕೈಜೋಡಿಸುವ ಮೂಲಕ ಅಳಿಲ ಸೇವೆ-ಪ್ರೊ.ಬಿ.ವಿ ಸೂರ್ಯನಾರಾಯಣ:
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಂಚಾಲಕ, ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ವಿ ಸೂರ್ಯನಾರಾಯಣರವರು ಪ್ರಾಸ್ತಾವಿಕವಾಗಿ ಮಾತನಾಡಿ, ತುಳುನಾಡಿನ ಜನರು ದೈವ ದೇವರನ್ನು ಅನಾದಿ ಕಾಲದಿಂದಲೂ ಪೂಜಿಸಿ, ಆರಾಧಿಸಿ ಸಾಮರಸ್ಯದ ಬದುಕು ಸಾಗಿಸುತ್ತಿದ್ದಾರೆ. ಶ್ರೀ ಕ್ಷೇತ್ರದ ರಕ್ತೇಶ್ವರಿ, ಚಾಮುಂಡೇಶ್ವರಿ ಸಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇವಿಯ ಒಪ್ಪಿಗೆ ತಗೊಂಡು ಮುಂದುವರೆದಿರುವುದು ಇಲ್ಲಿ ಸೇರಿದ ಭಕ್ತರು ಸಾಕ್ಷಿ. ಮನುಷ್ಯನ ಶಾರೀರಿಕ, ಮಾನಸಿಕ, ದೈಹಿಕ ಆರೋಗ್ಯಕ್ಕೆ ದೈವ, ದೇವರ ಅನುಗ್ರಹ ಬೇಕೇ ಬೇಕು. ಇಲ್ಲಿನ ಚಾಮುಂಡೇಶ್ವರಿ ತಾಯಿಯು ಏಷ್ಟೋ ಭಕ್ತರ ಕಷ್ಟಗಳಿಗೆ ನೆರವಾಗಿದ್ದಾಳೆ. ದೈವಜ್ಞರ ಪ್ರಶ್ನಾಚಿಂತನೆಯಂತೆ 45 ವರುಷದ ಬಳಿಕ ಮತ್ತೊಮ್ಮೆ ಶ್ರೀ ಕ್ಷೇತ್ರವು ಜೀರ್ಣೋದ್ಧಾರಗೊಳ್ಳುತ್ತಿದ್ದು ಈ ಪುಣ್ಯಕಾರ್ಯದಲ್ಲಿ ಜಾತಿ-ಧರ್ಮ ಮರೆತು ಎಲ್ಲರೂ ಒಗ್ಗೂಡಿ ಕೈಜೋಡಿಸುವ ಮೂಲಕ ಅಳಿಲ ಸೇವೆ ಮಾಡೋಣ ಎಂದರು.


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಶಿವರಾಮ ಆಳ್ವ ಬಳ್ಳಮಜಲು, ಅನಿತಾ ಆಯಿಲ್ ಮಿಲ್‌ನ ಅಜಿತ್ ನಾಯಕ್, ಸಂಚಾಲಕರಾದ ರಘುನಾಥ್ ರೈ ಕೆಯ್ಯೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ಗಣಪತಿ ಸಮಿತಿಯ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಪ್ರಸನ್ನ ಕುಮಾರ್ ಮಾರ್ತ, ಶ್ರೀ ಕ್ಷೇತ್ರದ ಅರ್ಚಕರಾದ ಉದಯನಾರಾಯಣ ಕಲ್ಲೂರಾಯ, ನಗರಸಭಾ ಸದಸ್ಯೆ ಶ್ರೀಮತಿ ಶೈಲಾ ಪೈ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜೆ.ಕೆ ಕನ್‌ಸ್ಟ್ರಕ್ಷನ್ಸ್‌ನ ಜಯಕುಮಾರ್ ನಾಯರ್, ಜಯಂತ್ ಶೆಟ್ಟಿ ಕಂಬಳತ್ತಡ್ಡ, ಲಕ್ಷ್ಮಣ ಬೈಲಾಡಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಚೇತನ್ ಕುಮಾರ್ ಮೊಟ್ಟೆತ್ತಡ್ಕ ಪ್ರಾರ್ಥಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಮಿಶನ್‌ಮೂಲೆ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಪಾಟಾಳಿ ವಂದಿಸಿದರು. ದೇವಸ್ಥಾನದ ಆಡಳಿತ ಸಮಿತಿಯ ಮೊಕ್ತೇಸರ ರಮೇಶ್ ರೈ ಮಿಶನ್‌ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶೇಖರ್ ಬಿ.ಕೆ, ಆಂತರಿಕ ಲೆಕ್ಕಪರಿಶೋಧಕ ವಿಶ್ವನಾಥ ರೈ ಮಿಶನ್‌ಮೂಲೆ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಮುಕ್ರಂಪಾಡಿ ಸತೀಶ್ ಎಂ, ಕೋಶಾಧಿಕಾರಿ ಮೋಹನ್ ಕುಮಾರ್, ಜೊತೆ ಕಾರ್ಯದರ್ಶಿಗಳಾದ ಸಂತೋಷ್ ರೈ, ಲಕ್ಷ್ಮಣ್ ಶೆಟ್ಟಿ, ಸುಂದರ ಕೆ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ರೈ ಮಿಶನ್‌ಮೂಲೆ, ಗುಮ್ಮಣ್ಣ ಗೌಡ, ತಿಮ್ಮಕ್ಕ ರೈ, ಸುರೇಂದ್ರ ರೈ ನೇಸರ, ಸುಪ್ರೀತ್ ಕುಮಾರ್ ಜೈನ್, ಕಾರ್ಯದರ್ಶಿ ಸುರೇಂದ್ರ ಎ, ಜೊತೆ ಕಾರ್ಯದರ್ಶಿ ತನಿಯಪ್ಪ ಸುವರ್ಣ, ಜೊತೆ ಕೋಶಾಧಿಕಾರಿ ಮನೋಹರ ಪಾಟಾಳಿ, ಹರಿಣಿ ಪುತ್ತೂರಾಯ, ನಗರಸಭೆ ಸದಸ್ಯೆ ಶೈಲಾ ಪೈ, ಸದಸ್ಯರುಗಳಾದ ಹರಿಣಾಕ್ಷ ಮುಕ್ರಂಪಾಡಿ, ರವಿಚಂದ್ರ ಆಚಾರ್ಯ, ರಾಮಚಂದ್ರ ಪುಚ್ಚೇರಿ, ಗಣೇಶ್ ದೇವಾಡಿಗ, ಮನೋಹರ್ ನಾಕ್ ಮುಕ್ರಂಪಾಡಿ, ನಾರಾಯಣ ನಾಕ್ ಸಿಂಹವನ, ರವೀಂದ್ರ ರೈ, ಅರುಣ್ ಕುಮಾರ್ ಮೊಟ್ಟೆತ್ತಡ್ಕ, ದಕ್ಷಿತ್ ಎಸ್.ಎಂ, ಕೇಶವ ಕುಲಾಲ್, ಹರೀಶ್ ಪ್ಲಂಬರ್, ರಮೇಶ್ ಪ್ಲಂಬರ್, ಮೋನಪ್ಪ ಪೂಜಾರಿ, ಪ್ರವೀಣ್ ಗೌಡ ಸಂಪ್ಯದಮೂಲೆ, ಶ್ರೀಮತಿ ಪುಷ್ಪಾ ಸಚಿನ್, ಶ್ರೀಮತಿ ಶಶಿಕಲಾ ಶ್ರೀಪಾದ, ಅನಿತಾ ವಸಂತ ನಾತೈಕ್, ಕಾವ್ಯ ಶೀತಲ್, ಸುರೇಶ್ ಗೌಡ ಕೆ.ವಿ, ಹರ್ಷಿತ್ ವೇಣುಗೋಪಾಲ್ ಗೌಡ, ಕವಿತಾ ಮೋಹನ್, ಶೀನ ಪೂಜಾರಿ, ಆನಂದ ಬಿ.ಆರ್, ಮಹಾಲಿಂಗ ಇಂಡಸ್ಟ್ರೀಸ್‌ನ ಹರೀಶ್ ಕುಮಾರ್, ವಿಷ್ಣು ಇಲೆಕ್ಟ್ರಿಕಲ್ಸ್‌ನ ಬಿ.ಸುಧಾಕರ, ಪ್ರಕಾಶ್ ನಾಕ್, ಯೋಗೀಶ್ ಆಚಾರ್ಯ, ಸುಪ್ರೀತ್ ಶೆಟ್ಟಿ ಮೊಟ್ಟೆತ್ತಡ್ಕ, ದಿನೇಶ್ ಮೊಟ್ಟೆತ್ತಡ್ಕ, ಸುಕುಮಾರ ಗೌಡ ಅಮ್ಮುಂಜ, ರೇಖಾನಾಥ ರೈ ಸಂಪ್ಯದಮೂಲೆ, ಜಯಂತಿ ಸೀತಾರಾಮ್, ನಳಿನಿ, ಲಲಿತಾ ಸುವರ್ಣ, ಸುಜಾತಾ, ಲೀಲಾವತಿ ಶೇಖರ, ಶ್ರೀಲತಾ-ರಮೇಶ್ ರೈರವರು ಸಹಕರಿಸಿದರು. ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


ರೂ.2.5 ಕೋಟಿ ವೆಚ್ಚ..
ದೇವಸ್ಥಾನದ ಪುನಃನಿರ್ಮಾಣ ಕಾರ್ಯದ ಕುರಿತು ಅಷ್ಡಮಂಗಲ ಪ್ರಶ್ನಾಚಿಂತನೆಯನ್ನು ಶ್ರೀ ಕ್ಷೇತ್ರದಲ್ಲಿ ಇರಿಸಿದ್ದು ಸುತ್ತುಪೌಳಿ ದೇವಾಲಯ ನಿರ್ಮಾಣ, ಆದಿಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶ್ರೀರಕ್ತೇಶ್ವರಿ, ಶ್ರೀ ಚಾಮುಂಡೇಶ್ವರಿ ಗುಳಿಗ, ಕಲ್ಲುರ್ಟಿ, ನಾಗದೇವರಿಗೆ ಆಲಯ ನಿರ್ಮಿಸಿ ಪ್ರತಿಷ್ಠಾಪನೆ, ಬ್ರಹ್ಮಕಲಶ ಕಾರ್ಯಕ್ಕೆ ಸುಮಾರು ರೂ. 2.5 ಕೋಟಿ ವೆಚ್ಚದಲ್ಲಿ ಶ್ರಿರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನಿರ್ಮಾಣವಾಗಲಿದೆ.

ಸನ್ಮಾನ…
ಪ್ರಸಕ್ತ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಂತ್ರಿವರ್ಯರಾದ ಕುಕ್ಕಾಡಿ ಪ್ರೀತಂ ಪುತ್ತೂರಾಯರವರನ್ನು ಶ್ರೀರಕ್ತೇಶ್ವರಿ-ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ವತಿಯಿಂದ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸುವ ಮೂಲಕ ಸನ್ಮಾನಿಸಲಾಯಿತು.

ವಿಜ್ಞಾಪನಾ ಪತ್ರ ಬಿಡುಗಡೆ..
ಶ್ರೀ ಕ್ಷೇತ್ರದ ಪುನಃನಿರ್ಮಾಣ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರವನ್ನು ವೇದಿಕೆಯಲ್ಲಿನ ಅತಿಥಿ ಗಣ್ಯರು ಬಿಡುಗಡೆಗೊಳಿಸಿ ಶ್ರೀ ಕ್ಷೇತ್ರದ ಕಾರ್ಯಗಳು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ವಿಜ್ಙಾಪನಾ ಪತ್ರ ಬಿಡುಗಡೆ ಮುನ್ನ ದೇವಸ್ಥಾನದ ಪ್ರಧಾನ ಅರ್ಚಕರಾದ ಉದಯನಾರಾಯಣ ಕಲ್ಲೂರಾಯ ಹಾಗೂ ರಮೇಶ್ ಭಟ್ ಮುಕ್ರಂಪಾಡಿರವರಿಂದ ವಿಜ್ಞಾಪನಾ ಪತ್ರವನ್ನು ಆಶೀರ್ವದಿಸಲಾಯಿತು.

LEAVE A REPLY

Please enter your comment!
Please enter your name here