ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಕ್ಲಬ್ ಯುವ, ಜೆಸಿಐ ಪುತ್ತೂರು, ಮಲ್ಪೆಯ ಮಧ್ವರಾಜ್ ಟ್ರಸ್ಟ್ ವತಿಯಿಂದ ಮನೆಯ ಶ್ವಾನಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಪುತ್ತೂರು ಎಪಿಎಂಸಿ ರಸ್ತೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ೯.೩೦ಕ್ಕೆ ಬ್ಲಾಕ್ ಕಾಂಗ್ರೆಸ್ ವಕ್ತಾರರ ಸಭೆ, ಮುಂಚೂಣಿ ಘಟಕದ ಅಧ್ಯಕ್ಷರ ಸಭೆ, ೧೦ಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರ ಸಭೆ, ೧೧ಕ್ಕೆ ವಲಯ ಅಧ್ಯಕ್ಷರ ಸಭೆ, ಮಧ್ಯಾಹ್ನ ೧೨ಕ್ಕೆ ಸಂಘಟನಾ ಕಾರ್ಯದರ್ಶಿಗಳ ಸಭೆ, ೧ಕ್ಕೆ ಕಾರ್ಯದರ್ಶಿಗಳ ಸಭೆ, ೨ಕ್ಕೆ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ
ಪುತ್ತೂರು ಅಶ್ವಿನ್ ಅಪ್ಟಿಕಲ್ಸ್ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರದಲ್ಲಿ ಅಟೋ ಡ್ರೈವರ್‌ಗಳಿಗೆ ಉಚಿತ ಕಣ್ಣಿನ ಗ್ಲಾಕೋಮ ಪರೀಕ್ಷೆ, ಕನ್ನಡಕ ವಿತರಣೆ
ನೆಹರುನಗರ ಸುದಾನ ವಸತಿಯುತ ಶಾಲೆಯಲ್ಲಿ ರೋಲಿಂಗ್ ಥಂಡರ್ ವತಿಯಿಂದ ಬೇಸಿಗೆ ಸ್ಕೇಟಿಂಗ್ ತರಬೇತಿ ಶಿಬಿರ ಪ್ರಾರಂಭ
ಮಾಲೆತ್ತೋಡಿ ದ.ಕ.ಜಿ.ಪಂ ಕಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ-ಪೆರ್ಲಂಪಾಡಿ ವತಿಯಿಂದ ಬೇಸಿಗೆ ಶಿಬಿರ ಕಲಿಕಾ ಚೈತನ್ಯ’ ಟಿಸವಣೂರು ಗ್ರಾಮ ಅರೆಲ್ತಡಿ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ “ಮನೋಲ್ಲಾಸ” ಮಕ್ಕಳ ಬೇಸಿಗೆ ಶಿಬಿರ ಟಿಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಜಾತ್ರೋತ್ಸವದ ಗೊನೆ ಮುಹೂರ್ತ
ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ಮ ೧೨ಕ್ಕೆ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ಕ್ಕೆ ದೈವಗಳ ಭಂಡಾರ ತೆಗೆಯುವುದು, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ೧೦ಕ್ಕೆ ದೈವಗಳ ನೇಮೋತ್ಸವ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ ತಿಂಗಳ ಷಷ್ಠಿ ಕಾರ್ಯಕ್ರಮ
ಪುಣ್ಚತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ೮ಕ್ಕೆ ಸ್ಥಳ ಶುದ್ದೀಕರಣ, ಗಣಹೋಮ, ಸಂಜೆ ೫.೩೦ಕ್ಕೆ ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವುದು, ೬.೩೦ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ೭ಕ್ಕೆ ಭಜನೆ, ರಾತ್ರಿ ೧೦ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ೧೧ರಿಂದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ
ಚಾರ್ವಾಕ ದೊಡ್ಡಮನೆ ಕಂಡಿಗ ತರವಾಡು ಮನೆಯಲ್ಲಿ ಬೆಳಿಗ್ಗೆ ದೈವಾಲಯದಲ್ಲಿ ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಅನ್ನಸಂತರ್ಪಣೆ
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಸಂಪ್ರೋಕ್ಷಣೆ, ೯.೩೦ರಿಂದ ದುಗಲಾಯಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ
ವಿಟ್ಲ ಬಸ್ ನಿಲ್ದಾಣದಿಂದ ನಾಡ ಕಚೇರಿವರೆಗೆ ಬೆಳಿಗ್ಗೆ ೧೦ಕ್ಕೆ ವಿಟ್ಲದ ಮುರುವ ಪ್ರದೇಶದ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವಿರುದ್ಧ ಅಕ್ರೋಶ ಮೆರವಣಿಗೆ
ಗೃಹಪ್ರವೇಶ
ಕೆದಂಬಾಡಿ ಗ್ರಾಮದ ಕಜೆಯಲ್ಲಿ ಸುಜಾತ ಕೃಷ್ಣಕುಮಾರ್ ಕೆದಂಬಾಡಿಗುತ್ತುರವರ ನೂತನ ಮನೆಕೃಷ್ಣ’ದ ಗೃಹಪ್ರವೇಶೋತ್ಸವ
ಶುಭಾರಂಭ
ಮಂಜಲ್ಪಡ್ಪು ಭಾರತ್ ಪೆಟ್ರೋಲಿಯಂ ಬಳಿಯ ಎಸ್.ಆರ್. ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೧ಕ್ಕೆ ಝರೊ ಟೈಲ್ ಝೋನ್ ಶುಭಾರಂಭ