ಬುರೂಜ್ ಶಾಲೆಯಲ್ಲಿ ಬೇಸಿಗೆ ಶಿಬಿರ

0

ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಸ್ಕೌಟ್ಸ್ ಗೈಡ್ಸ್ ಮತ್ತು ಕಬ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಬೇಸಿಗೆ ಶಿಬಿರ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.

ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ಇದರ ಕಾರ್ಯದರ್ಶಿ ಸುಕೇಶ್ ಕೆ ಅವರ ಉಪಸ್ಥಿತಿಯಲ್ಲಿ ಶಾಲಾ ಸ್ಕೌಟ್ಸ್ ಮೊಹಮ್ಮದ್ ಶುಹೈಬ್ ಸ್ಕೌಟ್ಸ್ ಧ್ವಜರೋಹಣಗೈದರು. ಸುಕೇಶ್ ಕೆ ಅವರು ಮಕ್ಕಳಿಗೆ ಸ್ಕಾರ್ಫ್ ಧರಿಸುವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿಯರಾದ ಜಯಶ್ರೀ ಬಿ ಸಾಲ್ಯಾನ್,ಎಲ್ಸಿ ಲಸ್ರಾದೋ ಶಿಕ್ಷಕರಾದ ಶೇಖ್ ಜಲಾಲುದ್ದೀನ್, ಮಮತಾ ಆರ್, ಪ್ರತೀಕ್ಷಾ ಹರೀಶ್, ಚೇತನಾ ಜೈನ್, ದಿವ್ಯ, ವನಿತಾ ಶೆಟ್ಟಿ, ಚಂದ್ರಾವತಿ, ಅನ್ನಪೂರ್ಣೇಶ್ವರಿ, ಖುರ್ಷಿದ್, ನೂರ್ ಜಹಾನ್, ಹಾಫಿಳಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪಥಸಂಚಲನ, ಕರಕುಶಲ ತಯಾರಿಕೆ, ಬೆಂಕಿ ಇಲ್ಲದೆ ಅಡುಗೆ, ಜಾನಪದ ನೃತ್ಯ, ಕಿರುನಾಟಕ, ರಸಪ್ರಶ್ನೆ ಹಾಗೂ ಶಿಬಿರಾಗ್ನಿ ಮುಂತಾದ ಕಾರ್ಯಕ್ರಮಗಳು ಮೊದಲ ದಿನ ನಡೆಯಿತು.ಮರುದಿನ ಹೊರ ಸಂಚಾರವು ಪಾಂಗಲ್ಪಾಡಿ ಫರಾರಿಯ ತೋಟ ವೀಕ್ಷಣೆ, ತೋಟದಲ್ಲಿ ಮನೋರಂಜನಾ ಆಟ, ಬಾಳೆ ಎಲೆ ಊಟ,ಬಸ್ತಿ ಕೋಡಿಯ ಈಜುಕೊಳದಲ್ಲಿ ಮೋಜಿನ ಆಟ ಈ ಶಿಬಿರದಲ್ಲಿ ನಡೆಸಲಾಯಿತು.

LEAVE A REPLY

Please enter your comment!
Please enter your name here