ಪುತ್ತೂರು:ಬನ್ನೂರು ಕುಂಟ್ಯಾನ ದೇವಸ್ಥಾನದ ಜಾತ್ರೋತ್ಸವದ ಸಿದ್ಧತೆಯಲ್ಲಿ ಸ್ವಯಂ ಸೇವಕನಾಗಿ ತೊಡಗಿಸಿಕೊಂಡಿದ್ದ ಬನ್ನೂರು ಅಡೆಂಚಿಲಡ್ಕ ನಿವಾಸಿ ದುರ್ಗಾದಾಸ್ ಯಾನೆ ಸಂದೀಪ್(31ವ)ರವರು ಏ.7ರಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಸಂದೀಪ್ ಅವರು ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ನಿರ್ವಹಿಸುತ್ತಿದ್ದು,ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸ್ಥಳೀಯ ಕ್ಲಿನಿಕ್‌ಗೆ ತೆರಳಿದ್ದರು.ಅಸ್ವಸ್ಥಗೊಂಡ ಅವರನ್ನು ಅಲ್ಲಿಂದ ತಕ್ಷಣ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕುಂಟ್ಯಾನ ಜಾತ್ರೆಗೆ ರಾತ್ರಿ ದ್ವಾರದ ಕೆಲಸ ಮಾಡುತ್ತಿದ್ದ ಸಂದೀಪ್
ದುರ್ಗಾದಾಸ್ ಯಾನೆ ಸಂದೀಪ್ ಅವರು ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಸಿದ್ಧತೆಗೆ ಬಂಟಿಂಕ್ಸ್ ಸಹಿತ ಹಲವು ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.ಏ.6ರಂದು ರಾತ್ರಿ ಕೂಡಾ ಜಾತ್ರೆಯ ಸಿದ್ದತೆಗೆ ದ್ವಾರ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲರೊಂದಿಗೂ ಸೇರಿ ಕೆಲಸ ಮಾಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.