ಕಡಬ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಕಡಬ ಗ್ರಾಮದ ಪಿಜಕ್ಕಳ ನಿವಾಸಿ ರಶ್ಮಿತಾ ಪಿ.ಎನ್ . ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ ವಾಣಿಜ್ಯ ವಿಭಾಗ ಕಂಪ್ಯೂಟರ್ ಸೈನ್ಸ್ ನಲ್ಲಿ 510(ಶೇ.85) ಅಂಕ ಪಡೆದುಕೊಂಡಿದ್ದಾರೆ. ಈಕೆ ಕಡಬ ಗ್ರಾಮ ಪಿಜಕ್ಕಳ ನಂದೋಳಿ ಮನೆ ನೋಣಪ್ಪ ಗೌಡ ಮತ್ತು ಲಲಿತ ದಂಪತಿ ಪುತ್ರಿ.