ವಿಟ್ಲದಲ್ಲಿ ಆರಂಭಗೊಳ್ಳಲಿದೆ ಕರ್ನಾಟಕದ ಡಿಜಿಟಲ್ ಮಾಧ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭರ್ಜರಿ ಗೇಮ್ ಶೋ

0

ವಿಟ್ಲ: ಕರ್ನಾಟಕದ ಡಿಜಿಟಲ್ ಮಾಧ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭರ್ಜರಿ ಗೇಮ್ ಶೋ ವಿಟ್ಲದಲ್ಲಿ ನಡೆಯಲಿದೆ.


ವಿಟ್ಲ ನಗರದಲ್ಲಿ ಕಾಸ್ ಪಣಂ ದುಡ್ಡು ಮನಿಮನಿ ಅನ್ನೋ ಹೆಸರಿನ ಎಂಟರ್ಟೈನ್ಮೆಂಟ್ ಡಿಜಿಟಲ್ ಚಾನಲ್ ಆರಂಭವಾಗುತ್ತಿದೆ. ಇದನ್ನು ರಾಜ್ಯದ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡದಂತಹ ಚಾನಲ್ ಗಳಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ ಅನುಭವವಿರುವ ಮಹಮ್ಮದ್ ರಫೀ, ಸಂತೋಷ್ ಪೂಜಾರಿ ಹಾಗೂ ಚೇತನ್ ಪುತ್ತೂರು ಈ ಮೂವರು ಸ್ನೇಹಿತರು ಆರಂಭಿಸುತ್ತಿದ್ದಾರೆ.


ಈ ಚಾನಲ್ ನಲ್ಲಿ ಸ್ಕ್ವಿಡ್ ಮಾದರಿಯಲ್ಲಿ ಗೇಮ್ ಶೋಗಳನ್ನು ನಡೆಸಲಾಗುತ್ತದೆ. ಮೊದಲ ಎಪಿಸೋಡ್ ನಲ್ಲಿ ಗೆದ್ದವರು 50ಸಾವಿರ ರೂಪಾಯಿ ಕ್ಯಾಷ್ ಪ್ರೈಸ್ ಪಡೆಯಲಿದ್ದಾರೆ. ಮೊದಲ ಎಪಿಸೋಡ್ ನಲ್ಲಿ ತುಳುನಾಡಿನ ಟ್ರೋಲರ್ಸ್, ಯೂಟ್ಯೂಬರ್ಸ್ ಹಾಗೂ ಪದವಿಪೂರ್ವ ಅಥವಾ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳು ಗೆದ್ದಲ್ಲಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುವಾಗಲೆಂದೇ ಬೃಹತ್ ಮೊತ್ತವನ್ನು ವಿನ್ನರ್ ಗೆ ನೀಡಲು ತೀರ್ಮಾನಿಸಲಾಗಿದೆ.


ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಈ ರೀತಿಯ ಗೇಮ್ ಶೋ ಒಂದು ನಡೆಯಲಿರುವುದು ವಿಶೇಷ. ಮುಂದಿನ ಎಪಿಸೋಡ್ ಗಳಲ್ಲಿ ಗೆದ್ದವರಿಗೆ ನೀಡುವ ಕ್ಯಾಷ್ ಪ್ರೈಸ್ ಮೊತ್ತ ಅಧಿಕವಾಗಲಿದ್ದು ನಿರೀಕ್ಷಿಸಲು ಸಾಧ್ಯವಾಗದಷ್ಟು ಮೊತ್ತವನ್ನು ನೀಡುವ ಉದ್ದೇಶ ಆಯೋಜಕರದ್ದಾಗಿದೆ. ಇದುವರೆಗೆ ಸ್ಯಾಟಲೈಟ್ ಚಾನಲ್ ಗಳಲ್ಲಿ ಮಾತ್ರ ಬೃಹತ್ ಮೊತ್ತ ನೀಡಲಾಗುತ್ತಿತ್ತು, ಇದೀಗ ಡಿಜಿಟಲ್ ಮಾಧ್ಯಮದಲ್ಲೂ ಸಾಧ್ಯ ಎಂಬುವುದನ್ನು ಕಾಸ್ ಪಣಂ ದುಡ್ಡು ಮನಿಮನಿ ಚಾನಲ್ ನಿರೂಪಿಸಲಿದೆ. ತುಳುನಾಡಿನಲ್ಲಿ ನಡೆಯುತ್ತಿರುವ ಈ ಗೇಮ್ ಶೋ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಗರಿಮೆಯಾಗಲಿದೆ. ಆಸಕ್ತರು 9591483545 ನಂಬರಿಗೆ ವಾಟ್ಸ್ ಆಪ್ ಮಾಡಬಹುದು. ಮುಂದಿನ ಎಪಿಸೋಡ್ ಗಳನ್ನು ರಾಜ್ಯದ ನಾನಾ ಭಾಗದಲ್ಲಿ ನಡೆಸುವ ಉದ್ದೇಶವೂ ಈ ತಂಡಕ್ಕಿದ್ದು ರಾಜ್ಯಾದ್ಯಂತ ಯುವಪೀಳಿಗೆ ಪಾಲ್ಗೊಳ್ಳಬಹುದು.

LEAVE A REPLY

Please enter your comment!
Please enter your name here