ದಕ್ಷಾಧ್ವರ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 8ನೇ ವಾರ್ಷಿಕೋತ್ಸವ ಎ.10ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಸಂಜೆ 5.30 ರಿಂದ ಮಧ್ಯರಾತ್ರಿ 03 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ನಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರು ವಹಿಸಿಕೊಳ್ಳಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಉಪಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲರವರು ಭಾಗವಹಿಸಲಿದ್ದಾರೆ.
ಪಟ್ಲ ಸತೀಶ್ ಶೆಟ್ಟಿ ಇವರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಕನ್ನಡ ಪ್ರಸಂಗ ‘ದಕ್ಷಾಧ್ವರ ಗಿರಿಜಾ ಕಲ್ಯಾಣ” (ಪೌರಾಣಿಕ ಪುಣ್ಯ ಕಥಾನಕ)ವನ್ನು ಪ್ರದರ್ಶಿಸಲಾಗುತ್ತದೆ. ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿ, ಭರತ್ ರಾಜ್ ವಿ.ಶೆಟ್ಟಿ ಸಿದ್ಧಕಟ್ಟೆ, ಸಂಗೀತ ಮನ್ವಿತ್ ಇರಾ, ಚಂಡೆ, ಮದ್ದಳೆಯಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ಪೂರ್ಣೇಶ್ ಆಚಾರ್ಯ, ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಾರಿಗಳಾಗಿ ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗಿಶ್ ಕಡಬ, ವಿಶ್ವಾಸ್ ಕಾವೂರು, ವಿದೂಷಕರಾಗಿ ಹಾಸ್ಯರತ್ನ ಬಾಲಕೃಷ್ಣ ಮಣಿಯಾಣಿ ಮವಾರು, ಹಾಸ್ಯಪಟು ಸಂದೇಶ್ ಮಂದಾರ, ಬಣ್ಣ ಮನೀಷ್ ಪಾಟಾಳಿ ಎಡನೀರು, ಮಧುರಾಜ್ ಪೆರ್ಮುದೆ, ಮನ್ವಿತ್ ನಿಡ್ಡೋಡಿ, ಪ್ರಧಾನ ಪಾತ್ರಧಾರಿಗಳಾಗಿ ಬಿ.ರಾಧಾಕೃಷ್ಣ ನಾವಡ ಮಧೂರು, ಸಂತೋಷ್ ಕುಮಾರ್, ಮೋಹನ್ ಬೆಳ್ಳಿಪ್ಪಾಡಿ, ಲೋಕೇಶ್ ಮುಚ್ಚೂರು, ದಿವಾಕರ ಕಾಣಿಯೂರು, ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಣ ಶಿವಶಂಕರ್ ಭಟ್, ರಾಕೇಶ್ ರೈ ಅಡ್ಡ, ರಂಜಿತ್ ಗೋಳಿಯಡ್ಕ-ಮಲ್ಲ, ಸುಹಾಸ್ ಪಂಜಿಕಲ್ಲು, ರಮೇಶ್ ಪಟ್ರಮೆ, ಮಧುರಾಜ್ ಪೆರ್ಮುದೆ, ಮನ್ವಿತ್ ನಿಗ್ಗೋಡಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಡಿ.ಮಾಧವ ಬಂಗೇರ ಕೊಳತ್ತಮಜಲು, ಲಕ್ಷ್ಮಣ್ ಪೆರ್ಮುದೆ, ಭುವನ್ ಮೂಡುಜೆಪ್ಪು, ಸೋಹನ್ ರಾಮಕುಂಜರವರು ಭಾಗವಹಿಸಲಿರುವರು.
ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾ ರಸಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಪುತ್ತೂರು ಘಟಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಪ್ರಕಟಣೆ ತಿಳಿಸಿದೆ.