ಪುತ್ತೂರು : ಕಾಣಿಯೂರು ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ, ಮತ್ತು ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ನಾರಾಯಣ ಭಟ್ ರವರ ಪುತ್ರಿ ಕಾಣಿಯೂರು ಸ.ಪ.ಪೂರ್ವ ಕಾಲೇಜಿನ ಶ್ರೀವಿದ್ಯಾ ರವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಐದನೇ ಮತ್ತು ಸರಕಾರಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುವ ಹಿನ್ನಲೆಯಲ್ಲಿ ಕಾಣಿಯೂರು ಪ್ರಾ.ಶಾಲಾ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಶಾಲಾ ಮುಖ್ಯ ಗುರು ಬಾಲಕೃಷ್ಣ ಕೆ, ಶಿಕ್ಷಕಿಯರಾದ ಸುಜಯ, ಭಾರತಿ ಮತ್ತು ವೀಕ್ಷೀತಾ ಹಾಗೂ ಶ್ರೀವಿದ್ಯಾರವರ ಪೋಷಕರು ಉಪಸ್ಥಿತರಿದ್ದರು.