ಟಾಸ್ಕ್‌ನಲ್ಲಿ 21 ಲಕ್ಷ ರೂ.ಬಂದಿದೆ-ಡ್ರಾ ಮಾಡಲು 4.2 ಲಕ್ಷ ರೂ.ಟ್ಯಾಕ್ಸ್ ಪಾವತಿಸಿ: ರಿವ್ಯೂ ಕೊಟ್ಟು ಹಣಗಳಿಸುವ ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ ವಂಚನೆ-ದೂರು

0

ಪುತ್ತೂರು:ಗೂಗಲ್ ಮ್ಯಾಪ್‌ನಲ್ಲಿ ಹೊಟೇಲ್,ರೆಸ್ಟೋರೆಂಟ್‌ಗೆ ರಿವ್ಯೂ ಕೊಟ್ಟು ಹಣ ಗಳಿಸುವಂತೆ ಹೇಳಿ ಮೋಸ ಮಾಡುವ ಜಾಲವೊಂದರ ಕುರಿತು ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.


ವೀರಕಂಬದ ಗಣೇಶ್‌ಕೋಡಿ ಮನೆ ರಾಜೇಶ್ ಆಚಾರ್ಯ ಎಂಬವರು ಈ ಕುರಿತು ದೂರು ನೀಡಿದವರು.ಏ.6ರಂದು ಮೊಬೈಲ್‌ನಲ್ಲಿ ವ್ಯಾಟ್ಯಾಪ್ ನೋಡುತ್ತಿದ್ದ ಸಮಯ ಅಪರಿಚಿತ ನಂಬ್ರದಿಂದ ಗೂಗಲ್ ಮ್ಯಾಪ್‌ನಲ್ಲಿ ರೆಸ್ಟೋರೆಂಟ್, ಹೋಟೆಲ್‌ಗಳಿಗೆ ರಿವ್ಯೂ ಕೊಟ್ಟು 5 ಸ್ಟಾರ್ ನೀಡಿ ಸ್ಕ್ರೀನ್‌ಶಾಟ್ ಕಳುಹಿಸಿ ಹಣ ಗಳಿಸುವ ಪಾರ್ಟ್‌ಟೈಮ್ ಜಾಬ್ ಮಾಡುವಿರಾ ಎಂದು ಹೇಳಿ ಒಂದು ಗೂಗಲ್ ಮ್ಯಾಪ್‌ನ ಹೋಟೆಲೊಂದರ ಲಿಂಕ್ ಕಳುಹಿಸಿದ್ದರು.ಅದಕ್ಕೆ ತಾನು ರಿವ್ಯೂ ಕೊಟ್ಟು 5 ಸ್ಟಾರ್ ನೀಡಿ ಕಮೆಂಟ್ ಮಾಡಿ ಸ್ಕ್ರೀನ್‌ಶಾಟ್ ಅದೇ ನಂಬರ್ ಗೆ ಕಳುಹಿಸಿದ್ದು ಅದಕ್ಕೆ ಪ್ರತಿಯಾಗಿ ರೂ.205 ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿರುತ್ತಾರೆ.ನಂತರ ಟೆಲಿಗ್ರಾಂ ಗ್ರೂಪ್‌ಗೆ ಸೇರಿ ಎಂದು ಹೇಳಿ ಅದೇ ನಂಬರ್‌ನಿಂದ ಸುಜಾತ ಎಂಬ ಹೆಸರಿನ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದು ಅದರ ಮೂಲಕ ಸುಜಾತ ಹೆಸರಿನ ವ್ಯಕ್ತಿ ಜೊತೆ ಚಾಟ್ ಮಾಡಿ ಅದರಲ್ಲಿ ಕೂಡ ರಿವ್ಯೂ ನೀಡಿದ್ದು ಅದಕ್ಕೆ 1 ಟಾಸ್ಕ್‌ಗೆ ರೂ.50ರಂತೆ ನೀಡುತ್ತಿದ್ದರು.ನಂತರ ಅದೇ ವ್ಯಕ್ತಿ 1000 ರೂ. ನೀವು ಕಳುಹಿಸಿದರೆ ನಿಮಗೆ 1 ಗಂಟೆಯೊಳಗೆ 1300 ಕ್ಯಾಶ್ ಬ್ಯಾಕ್ ಸಿಗುವುದಾಗಿ ತಿಳಿಸಿದ್ದು ಅದರಂತೆ ತಾನು 1000 ರೂ.ಹಣವನ್ನು ಅವರು ಕಳುಹಿಸಿದ ಕ್ಯೂ ಆರ್ ಕೋಡ್ ಮುಖೇನ ಕಳುಹಿಸಿದ್ದು ತನಗೆ 1300 ರೂ ಹಣ ಬಂದಿರುತ್ತದೆ.ನಂತರ ಅದೇ ವ್ಯಕ್ತಿಯು ಟೆಲಿಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬನ ಪರಿಚಯ ಮಾಡಿಸಿ ಅದರಲ್ಲಿ ಕೂಡ ಚಾಟ್ ಮಾಡಿ ಅದರಲ್ಲಿ ಕೂಡ ರಿವ್ಯೂ ನೀಡುವ ಟಾಸ್ಕ್ ನೀಡಿದ್ದು ಅದರಲ್ಲಿಯೂ ತಾನು ಟಾಸ್ಕ್ ಕಂಪ್ಲೀಟ್ ಮಾಡಿದ್ದೆ.ನಂತರ ಆತನು ನ್ಯೂ ಸೆಕ್ಟರ್ ಎಂದು ಹೇಳಿ ರಾಧಾ ಕಜೆ ಎಂಬ ವ್ಯಕ್ತಿಯ ಟೆಲಿಗ್ರಾಂ ಖಾತೆಯನ್ನು ನೀಡಿದ್ದು ಅಲ್ಲಿ ಕೂಡ ರಿವ್ಯೂ ನೀಡುವ ಟಾಸ್ಕ್ ನೀಡಿದ್ದು ಅಲ್ಲಿ ಕೂಡ,ಆರೋಪಿಗಳು ನೀಡಿದ ಖಾತೆಗೆ ಹಣವನ್ನು ಹೂಡಿ ಟಾಸ್ಕ್ ಮಾಡುತ್ತಿದ್ದೆ.ಅದಲ್ಲದೇ ಇನ್ನೊಂದು ಟೆಲಿಗ್ರಾಂ ಗ್ರೂಪ್ ವಿಐಪಿ-2 ಗ್ರೂಪ್ 249 ನೇದಕ್ಕೆ ಜಾಯಿನ್ ಮಾಡಿಸಿ ಅಲ್ಲಿ ಕೂಡ ರಿವ್ಯೂ ನೀಡುವ ಟಾಸ್ಕ್‌ಗೆ ತನ್ನ ಹಾಗೂ ಹೆಂಡತಿಯ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ, ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದು ನಂತರ ನನಗೆ 21 ಲಕ್ಷ ರೂ.ಹಣ ಟಾಸ್ಕ್ ನಲ್ಲಿ ಬಂದಿರುವುದಾಗಿ ಟೆಲಿಗ್ರಾಂ ಗ್ರೂಪ್‌ನಲ್ಲಿ ತೋರಿಸುತ್ತಿದ್ದು ಅದನ್ನು ಡ್ರಾ ಮಾಡುವರೇ 4.2 ಲಕ್ಷ ರೂ. ಟ್ಯಾಕ್ಸ್ ಪಾವತಿಸಬೇಕೆಂದು ತಿಳಿಸಿದಾಗ, ಇದು ಮೋಸವೆಂದು ತಿಳಿದು ಬಂದಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸು ಠಾಣೆಯಲ್ಲಿ ಕಲಂ 66(ಡಿ)ಐಟಿ ಆಕ್ಟ್ 318(4),319(2)ಬಿಎನ್‌ಎಸ್ ಕಾಯ್ದೆಯಂತೆ ಪ್ರಕರಣ (ಅ.ಕ್ರ.22/2025) ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here