ಉಪ್ಪಿನಂಗಡಿ ಸಿಟಿ ಸೆಂಟರ್ ನಲ್ಲಿ ಸಿಟಿ ಉತ್ಸವ ಉದ್ಘಾಟನೆ

0

ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ನಲ್ಲಿ ‘ಸಿಟಿ ಉತ್ಸವ’ ಕಾರ್ಯಕ್ರಮವು ಇತ್ತೀಚೆಗೆ ಮಳಿಗೆಯಲ್ಲಿ ನೆರವೇರಿತು.

ವಕ್ಫ್ ಸಮಿತಿಯ ಮಾಜಿ ಸದಸ್ಯ ಎಂ.ಬಿ ನಝೀರ್ ಮಠರವರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಿಟಿ ಸೆಂಟರ್ ಉಪ್ಪಿನಂಗಡಿಯಲ್ಲಿ ಮೌಲ್ಯಾಧಾರಿತ ವ್ಯಾಪಾರದ ಮೂಲಕ ಉತ್ತಮ ಹೆಸರು, ಖ್ಯಾತಿ ಗಳಿಸಿಕೊಂಡಿದೆ. ಅವರ ರಿಯಾಯಿತಿ ದರದ ವ್ಯಾಪಾರ ಸಹ ಯಶಸ್ವಿಯಾಗಲಿದೆ. ನಮ್ಮ ಜನತೆ ಇದರ ಉಪಯೋಗ ಪಡೆದುಕೊಳ್ಳುವಲ್ಲಿ ಸಿಟಿ ಉತ್ಸವ ಇನ್ನೂ ಹೆಚ್ಚಿನ ಸೇವೆಗೆ ಆಧಾರವಾಗಲಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ಎಂ.ಜಿ ಸಹೋದರರ ಒಗ್ಗಟ್ಟು ಎಲ್ಲರಿಗೂ ಮಾದರಿ. ಅವರು ವ್ಯಾಪಾರಿ ಕ್ಷೇತ್ರದಲ್ಲಿ ಬೆಳೆಯಲು ಅವರ ಒಗ್ಗಟ್ಟು ಕಾರಣವಾಗಿದೆ. ಎಂ.ಜಿ ರಫೀಕ್ ಹಲವು ಸೇವಾ ಕಾರ್ಯಕ್ರಮದ ಮೂಲಕ ಹೆಸರನ್ನು ಗಳಿಸಿದ್ದಾರೆ. ವ್ಯಾಪಾರದಲ್ಲಿ ಆದ ಲಾಭದ ಒಂದಂಶವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ ಎಂದರು.

ಸಿಟಿ ಸೆಂಟರ್ ಉದ್ಯೋಗಿ ಸುಮತಿ ಶೆಟ್ಟಿ ಮಾತನಾಡಿ, ಸಿಟಿ ಉತ್ಸವವು ಜನತೆಗೆ ತಲುಪಿ ಅತ್ಯಂತ ಯಶಸ್ವಿಯಾಗಿ ಮೂಡಿ ಬರಲಿ ಎಂದರು.

ಪುತ್ತೂರಿನ ಮದರ್ ಇಂಡಿಯಾ ಪಾದರಕ್ಷೆ ಮಳಿಗೆಯ ಮಾಲಕ ಎಂ.ಜಿ ರಝಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದರ್ಜೆ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಟಿ ಸೆಂಟರ್ ಸಿಬ್ಬಂದಿ ಸಹಕರಿಸಿದರು.

ಮಳಿಗೆಯಲ್ಲಿನ ವೈಶಿಷ್ಟ್ಯತೆ…
*ಪುರುಷರ, ಮಕ್ಕಳ ಮತ್ತು ಮಹಿಳೆಯರ ಎಲ್ಲಾ ತರಹದ ಉಡುಪುಗಳ ಮೇಲೆ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಹಾಗೂ ಫ್ಯಾನ್ಸಿ ಮತ್ತು ಪಾದರಕ್ಷೆಗಳಲ್ಲಿ ವಿಶೇಷ ರಿಯಾಯಿತಿ
*ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ದರ ಕಡಿತ ಮಾರಾಟ
*ಒಂದು ಕೊಂಡರೆ ಒಂದು ವಸ್ತು ಉಚಿತ
*ಈ ಆಫರ್ ಕೆಲವೇ ದಿನಗಳು ಮಾತ್ರ, ಷರತ್ತುಗಳು ಅನ್ವಯಿಸುತ್ತದೆ.

LEAVE A REPLY

Please enter your comment!
Please enter your name here