ಪುತ್ತೂರು: ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿ ಮಲ್ಟಿ ಬ್ರ್ಯಾಂಡೆಡ್ ಪಶುಪತಿ ಲೈಟ್ಸ್, ಫ್ಯಾನ್ಸ್ ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಮೆಗಾ ಮಾರಾಟ ಮೇಳ ಉತ್ಸವವು ಏ.10 ರಿಂದ 14ರ ತನಕ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಗ್ರಾಹಕರಿಗೋಸ್ಕರ ಹಮ್ಮಿಕೊಂಡಿದ್ದು. ಇದರ ಕೂಪನ್ ಡ್ರಾ ವಿಜೇತರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಮಳಿಗೆಯಲ್ಲಿ ನೆರವೇರಿತು.
ಫಿಲಿಪ್ಸ್, ಹ್ಯಾವೆಲ್ಸ್, ಪಾಲಿಕ್ಯಾಬ್, ಆಟಂಬರ್ಗ್, ಓರಿಯೆಂಟ್, ಲ್ಯೂಕರ್, ಆಂಕರ್ ಮುಂತಾದ ಪ್ರತಿಷ್ಠಿತ ಕಂಪೆನಿಗಳ ಎಲ್.ಇ.ಡಿ ಹಾಗೂ ಬಿ.ಎಲ್.ಡಿ.ಸಿ ಫ್ಯಾನ್ ಗಳ ಮಾರಾಟ ಮೇಳ, ಫ್ಯಾನ್ಸಿ ಲೈಟ್ಸ್ ಗಳ ಗಳ ಮೇಲೆ ಶೇ.50 ವರೆಗೆ ಡಿಸ್ಕೌಂಟ್, ಲಕ್ಕಿ ಕೂಪನ್ ಮೂಲಕ ಬಿ.ಎಲ್.ಡಿ.ಸಿ ಫ್ಯಾನ್ ಗೆಲ್ಲುವ ಸುವರ್ಣಾವಕಾಶ, ಗ್ರಾಹಕರ ನೆಚ್ಚಿನ ಬ್ರ್ಯಾಂಡೆಡ್ ಎಲ್.ಇ.ಡಿ ಲೈಟ್ಸ್/ಬಿ.ಎಲ್.ಡಿ.ಸಿ ಫ್ಯಾನ್ ಗಳನ್ನು ಖರೀದಿಸಿ, ಇನ್ವರ್ಟರ್ ಸ್ನೇಹಿ ಫ್ಯಾನ್ ಗಳನ್ನು ಆಯ್ಕೆ ಮಾಡಿ ಅಧಿಕ ವಿದ್ಯುತ್ ಉಳಿಸಿಕೊಳ್ಳುವ ಅವಕಾಶ ಗ್ರಾಹಕರಿಗೆ ಸಂಸ್ಥೆಯು ಪರಿಚಯಿಸುತ್ತು. ಸಂಸ್ಥೆಗೆ ಆಗಮಿಸಿದ ಗ್ರಾಹಕರಿಗೆ ಸಂಸ್ಥೆಯು ಲಕ್ಕಿ ವಿಜೇತರ ಕೂಪನ್ ಡ್ರಾವನ್ನು ಆಯೋಜಿಸಿದ್ದು, ಇದನ್ನು ದರ್ಬೆ ಕಾಸ್ಮಿಕ್ ಗೇಮ್ಸ್ ಮಾಲಕ ಅಭಿಮನ್ಯುರವರು ವಿಜೇತರ ಚೀಟಿ ಎತ್ತುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ವಿಜೇತರು:ಜಯರಾಮ್ ಭಟ್ ಸಂಟ್ಯಾರು(ಪ್ರ), ಅನಿತಾ ಪರ್ಪುಂಜ(ದ್ವಿ), ಅಶ್ರಫ್ ಸಂಪ್ಯ(ತೃ), ಜುನೈದ್ ಮರೀಲು(ಚ), ದುರ್ಗಾಭಿರಾಮ ಮರೀಲು(ಪಂ). ವಿಜೇತರು ಬಿಎಲ್ಡಿಸಿ ಫ್ಯಾನ್, ಸೋಲಾರ್ ಲೈಟ್, ಈರನ್ ಬಾಕ್ಸ್ ಹಾಗೂ ಸೋಲಾರ್ ಲ್ಯಾಂಪ್ನ್ನು ತಮ್ಮದಾಗಿಸಿಕೊಂಡಿದ್ದಾರೆ,
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಅನ್ನಪೂರ್ಣ ಶರ್ಮ, ಸಿಬ್ಬಂದಿಗಳು ಉಪಸ್ಥಿತರಿದ್ದರು.