ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ‌ : ಅನುರಾಧ ರೈಗೆ ರಿಲೀಫ್- ಆರೋಪಿ ರಾಕೇಶ್ ಮಲ್ಲಿ ವಿಚಾರಣೆ

0

ಪುತ್ತೂರು:ಖ್ಯಾತ ಉದ್ಯಮಿಯಾಗಿದ್ದ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿದ್ದ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾಗೆ ಹೈಕೋರ್ಟ್‌ ರಿಲೀಫ್‌ ನೀಡಿದೆ.

ಪ್ರಕರಣ ರದ್ದು ಕೋರಿ ಅನುರಾಧಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಸಂದರ್ಣ ಅನುರಾಧ ಪರ ವಕೀಲ ವೆಂಕಟೇಶ್‌ ಅರಬಟ್ಟಿ, ವಿನಾಕಾರಣ ಪ್ರಕರಣದಲ್ಲಿ ಅನುರಾಧಾ ರೈ ಹೆಸರು ಬಂದಿದೆ. ಆಸ್ತಿ ವಿವಾದ ಆರು ತಿಂಗಳ ಹಿಂದೆ ಇತ್ಯರ್ಥವಾಗಿದೆ. ಎ.14 ರಂದೇ ಅನುರಾಧ ರೈ ಪುತ್ರಿಯೊಂದಿಗೆ ಯುರೋಪ್‌ಗೆ ತೆರಳಿದ್ದಾರೆ. ಕೊಲೆಯತ್ನ ಕೇಸ್‌ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ವಾದ ಮಂಡಿಸಿದ್ದು, ಈ ವೇಳೆ ಹೈಕೋರ್ಟ್‌ ಅನುರಾಧ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.

ಆರೋಪಿ ರಾಕೇಶ್ ಮಲ್ಲಿ ವಿಚಾರಣೆ
ಪ್ರಕರಣದ ಮೊದಲ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಅವರನ್ನು ಮಂಗಳವಾರ ಬಿಡದಿ ಠಾಣೆಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ರಾಕೇಶ್ ಅವರು, ತಮ್ಮ ವಕೀಲರೊಂದಿಗೆ ಮಧ್ಯಾಹ್ನ ವಿಚಾರಣೆಗೆ ಹಾಜರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ನೇತೃತ್ವದಲ್ಲಿ ಡಿವೈಎಸ್ಪಿಗಳು ಮತ್ತು ಇನ್ಸ್‌ಪೆಕ್ಟರ್ ಗಳನ್ನು ಒಳಗೊಂಡ ತಂಡ ರಾಕೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.

LEAVE A REPLY

Please enter your comment!
Please enter your name here