ವಿಟ್ಲ: ಇಲ್ಲಿನ ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ಎರಡು ಅಂಗಡಿಗಳು ತಡರಾತ್ರಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಬೆಂಕಿಯಿಂದಾಗಿ ಅಂಗಡಿಯೊಳಗಿದ್ದ ಅಡಿಕೆ, ಕಾಳುಮೆಣಸು ಸುಟ್ಟು ಬೂದಿಯಾಗಿದೆ.
ಮುರುಳಿದರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಕೂಡಲೇ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ಸ್ಥಳಕ್ಕೆ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಸಫಲರಾಗಿದ್ದಾರೆ.