ಸಾರಡ್ಕದ ಪೆಟ್ರೋಲ್ ಬಂಕ್ ವ್ಯವಹಾರದ ವಿಚಾರ – ತಲವಾರು ತೋರಿಸಿ ದಂಪತಿಗೆ ಬೆದರಿಕೆ ಆರೋಪ

0

ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಪೆಟ್ರೋಲ್ ಬಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮನೆಗೆ ನುಗ್ಗಿ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂಧನೆಗೈದು ತಲವಾರು ತೋರಿಸಿ ಬೆದರಿಕೆಯೊಡ್ಡಿದ ಆರೋಪದಲ್ಲಿ ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕರವರ ವಿರುದ್ದ ನ್ಯಾಯಾಲಯದ ಆದೇಶದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಪುಣಚ ಗ್ರಾಮದ ನಡುಸಾರು ನಿವಾಸಿ ರಾಮಚಂದ್ರ ಭಟ್ ರವರ ಪುತ್ರ ಹರೀಶ್ ಎನ್ ರವರ ದೂರುದಾರರಾಗಿದ್ದು, ಪುತ್ತೂರು‌ ತಾಲೂಕು ಬಲ್ನಾಡು ಗ್ರಾಮದ ಹಸಂತಡ್ಕ ನಿವಾಸಿ, ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕರವರು ಪ್ರಕರಣದ ಆರೋಪಿಯಾಗಿದ್ದಾರೆ.

ಎ.16ರಂದು ಮನೆಯಲ್ಲಿ ಪತ್ನಿ ಶ್ರೀದೇವಿ ಮಾತ್ರ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಮುರಳಿಕೃಷ್ಣ ಹಸಂತಡ್ಕ ʻʻನಿನ್ನ ಗಂಡನಲ್ಲಿ ಸಾರಡ್ಕದಲ್ಲಿ ಇರುವ ಪೆಟ್ರೋಲ್‌ ಪಂಪ್‌ ವ್ಯವಹಾರವನ್ನು ಬಿಟ್ಟು ಕೋಡಲು ಹೇಳು” ಎಂದು ಬೆದರಿಕೆ ಒಡ್ಡಿ ಹಿಂತಿರುಗಿದ್ದರು. ಆ ಬಳಿಗೆ ಎ.19ರಂದು ಪುನಃ ಆಗಮಿಸಿದ ಮುರಳಿಕೃಷ್ಣ ಹಸಂತಡ್ಕ ನನಗೆ ಹಾಗೂ ನನ್ನ ಪತ್ನಿ ಶ್ರೀ ದೇವಿಗೆ ತಲವಾರು ತೋರಿಸಿ ಬೆದರಿಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೆಟ್ರೋಲ್‌ ಪಂಪ್‌ ವ್ಯವಹಾರವನ್ನು ಬಿಟ್ಟುಕೊಡುವಂತೆ ಹೇಳಿ‌ ಹಿಂದಿರುಗಿದ್ದಾನೆ ಎಂದು ಹರೀಶ್ ಎನ್. ರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ‌ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಅನುಸಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here