ಬಡಗನ್ನೂರು :ರಿಕ್ಷಾವೊಂದಕ್ಕೆ ಸ್ವೀಫ್ಟ್ ಕಾರು ಡಿಕ್ಕಿ ಹೊಡೆದು ಕಾರು ಸವಾರ ಪರಾರಿಯಾದ ಘಟನೆ ಏ .27 ರಂದು ಶೇಖಮಲೆಯಲ್ಲಿ ನಡೆದಿದೆ.

ಬಡಗನ್ನೂರು ಗ್ರಾಮದ ಪೆರಿಗೇರಿ ಕುಶಾಲಪ್ಪ ಗೌಡ ರವರು ತಮ್ಮ ಸಂಬಂಧಿಕರಾದ ಜನಾರ್ದನ ಗೌಡ ಹಾಗೂ ಅವರ ಪತ್ನಿ ವೇದಾವತಿ ರವರೊಂದಿಗೆ ಸಂಬಂಧಿಕರೊಬ್ಬರ ಉತ್ತರಕ್ರಿಯೆಗೆ ಹೋಗಿ ಮರಳಿ ಬರುವ ಸಂಧರ್ಭದಲ್ಲಿ ಸುಳ್ಯ ಭಾಗದಿಂದ ರಭಸವಾಗಿ ಬಂದ ಸ್ವೀಫ್ಟ್ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಮಗುಚಿ ಜಖಮ್ ಗೊಂಡು ಆಟೋ ಚಾಲಕ ಕುಶಾಲಪ್ಪ ಗೌಡ ಜನಾರ್ದನ ಗೌಡ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನಾರ್ದನ ಗೌಡ ರವರ ಪತ್ನಿ ವೇದಾವತಿರವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆದ ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾದಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.