ಪೆರ್ನಾಜೆ: ಕಲಾಕುಂಜ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ವಿಷಯಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆ ಯವರಿಗೆ ದಾವಣಗೆರೆ ಚನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಗಣೇಶ ಶೆಣೈ ಸಾಲಿಗ್ರಾಮದ ಸಮಾರಂಭದ ಅಧ್ಯಕ್ಷ ಎ.27ರಂದು ಪ್ರದಾನ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಜಿಲ್ಲೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಬೈರಿ ಮಾತನಾಡಿ, ಸಾಧನೆ ಮಾಡಲು ಬಹಳಷ್ಟು ಶ್ರಮ, ತಾಳ್ಮೆ, ಶಕ್ತಿ ಬೇಕು. ಅಷ್ಟು ಸುಲಭವಾಗಿ ಗುರುತಿಸಿಕೊಳ್ಳುವುದು ಸಮಾಜದಲ್ಲಿ ಕಷ್ಟ ಎಂದರು.
ನಾಗೇಶ್ ಕಿಣಿ, ಸರಸ್ವತಿ, ದಾಸಪ್ಪ ಶೆಣೈ, ಡಾ ನ ಗಂಗಾಧರಪ್ಪ, ನಾಗರತ್ನ ಎಸ್ ಶೆಟ್ಟಿ,ಆಶಾ ಆಡಿಗ ಆಚಾರ್, ಜ್ಯೋತಿ, ಗಣೇಶ್ ಶೆಣೈ , ಹೆಚ್ ಮಂಜುನಾಥ್ ,
ರಾಘವೇಂದ್ರ ಶೆಣೈ, ಕೆ ಸಿ ಉಮೇಶ್, ಸೌಮ್ಯ ಪೆರ್ನಾಜೆ, ಸವಿತಾ ಕೋಡಂದೂರ್, ಹಾಗೂ ವಿವಿಧ ರಾಜ್ಯದ ಗಣ್ಯರು ಕಲಾವಿದರು ಸಾಧಕರು ಉಪಸ್ಥಿತರಿದ್ದರು.
ಕುಮಾರ್ ಪೆರ್ನಾಜೆ ತಮ್ಮ ವಿಶಿಷ್ಟ ಶೈಲಿಯ ಬರಹ ಲೇಖನ ಗಳಿಂದಲೇ ಹೆಸರಾದವರು. ಶಿವಮೊಗ್ಗದಲ್ಲಿನ ಕೃಷಿ ಮೇಳದಲ್ಲಿ. ದಕ ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿದವರು.ಹವ್ಯಕ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಲಾ ಪೋಷಕ ಕಲಾ ನಿರ್ದೇಶಕ ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡವರು.