ಪುತ್ತೂರು: ಬಿಳಿಯೂರು ಮಾಡತ್ತಾರು ಸರಕಾರಿ ಪ್ರೌಢ ಕನ್ನಡ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ರಕ್ಷಿತ್ ಅವರು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 597 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಿಳಿಯೂರು ಗ್ರಾಮದ ಕರ್ವೇಲು ಸಮೀಪದ ಮುದಲಾಜೆ ನಿವಾಸಿ ಗೀತಾ. ಎಂ. ಮತ್ತು ರವಿ ಅವರ ಪುತ್ರ.