ಪುತ್ತೂರು: ಶ್ರೀದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನ ಬೊಳುವಾರು ಇದರ ವತಿಯಿಂದ ನಡೆಸಲ್ಪಡುವ ತಿಂಗಳ ತಾಳಮದ್ದಳೆ ಕಾರ್ಯಕ್ರಮದಲ್ಲಿ ‘ಅತಿಕಾಯ ಮೋಕ್ಷ’ ಪ್ರಸಂಗದ ತಾಳಮದ್ದಳೆ ಮೇ.4ರಂದು ನಡೆಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀಪತಿ ನಾಯಕ್ ಅಜೇರು ಹಾಗೂ ಜಯಪ್ರಕಾಶ್ ನಾಕೂರು ಸಹಕರಿಸಿದರು. ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಪ್ರತಿಷ್ಟಾನದ ವಿದ್ಯಾರ್ಥಿಗಳಾದ ಪ್ರಮಥೇಶ್ ಶರ್ಮ, ಹರ್ಷ, ಸುಧನ್ವ, ಗೌತಮ್ ಕೃಷ್ಣ, ಅನೀಶ್ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಪ್ರಸನ್ನ ಬಳ್ಳಾಲ್, ಡಾ. ಗೀತಾ ಪ್ರಸಾದ್, ಪ್ರಚೇತ್ ಆಳ್ವ, ಮಿಹಿರ್ ಭಟ್ ಸಹಕರಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಮ ಕೆ ಸ್ವಾಗತಿಸಿದರು. ಪ್ರಸಾದ್ ಶಾನು ಭೋಗ್ ಮತ್ತು ಡಾ. ಗೀತಾ ಪ್ರಸಾದ್ ಈ ಕಾರ್ಯಕ್ರದ ಪ್ರಾಯೋಜಕತ್ವನ್ನು ವಹಿಸಿ ಧನ್ಯವಾದ ಸಮರ್ಪಿಸಿದರು. ಸಂಘದ ಕಾರ್ಯದರ್ಶಿ ಶಂಕರ ಭಟ್, ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸೇರಿದಂತೆ ಸಂಘದ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.