ಬಡಗನ್ನೂರು: ಪಟ್ಟೆ ಕಾಲುಸೇತುವೆ ಬಿರುಕು ಬಿಟ್ಟ ಪರಿಣಾಮ ಪಟ್ಟೆ-ಮೋಡಿಕೆ ಸಂಪರ್ಕ ಕಡಿತದ ಭೀತಿ ಎದುರಾಗಿದ್ದು, ಸೇತುವೆ ಕೆಳಭಾಗದಲ್ಲಿರುವ ಕಿಂಡಿ ಅಣ್ಣೆಕಟ್ಟುನ್ನು ತೆರವುಗೊಳಿಸುವಂತೆ ಸಾರ್ವಜನಿಕ ಆಗ್ರಹಿಸಿದ್ದಾರೆ.

ಉಪಯೋಗಕ್ಕೆ ಬಾರದ ಅನಾದಿಕಾಲದ ಕಿಂಡಿ ಅಣ್ಣೆಕಟ್ಟು:
ಪಟ್ಟೆ ಕಾಲು ಸೇತುವೆ ಪಕ್ಕ ಕೆಳಭಾಗದಲ್ಲಿ ಹಲಗೆ ಹಾಕದೆ ಉಪಯೋಗವಿಲ್ಲದ ಕಿಂಡಿ ಅಣ್ಣೆಕಟ್ಟಿನಲ್ಲಿ ಮಳೆಗಾಲದಲ್ಲಿ ನೀರಿನೊಂದಿಗೆ ದೊಡ್ಡ ದೊಡ್ಡ ಮರದ ದಿಮ್ಮಿ ಹಾಗೂ ಇತರ ಕಸಕಡ್ಡಿಗಳು ಹರಿದು ಬಂದು ಅಡ್ಡಲಾಗಿ ನಿಂತು ಹೊಳೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ತುಂಬಿದ ನೀರು ಆಚೆ ಹರಿಯಲಾರದೆ ಈಚೆ ಕೃಷಿ ಭೂಮಿಗೆ ನೀರು ನುಗ್ಗಿ ಕೃಷಿ ನಾಶವಾಗುತ್ತದೆ. ಉಪಯೋಗ ಶೂನ್ಯವಾದ ಈ ಕಿಂಡಿ ಅಣೆಕಟ್ಟುವಿನಿಂದಾಗಿ ಕೃಷಿ ನಾಶ ಕಳೆದ ಕೆಲ ವರ್ಷದಿಂದಲೂ ಸಂಭವಿಸುತ್ತಿದೆ.

ಬಿರುಕು ಬಿಟ್ಟ ಕಾಲು ಸೇತುವೆ
ಪಟ್ಟೆ-ಮೋಡಿಕೆ ಸಂಪರ್ಕ ಕಲ್ಪಿಸುವ ಈ ಕಾಲು ಸೇತುವೆಯ ಕಿಂಡಿ ಅಣ್ಣೆಕಟ್ಟಿನಲ್ಲಿ ಸೇತುವೆ ಪಕ್ಕದಲ್ಲಿರುವ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಮತ್ತು ಮರದ ದಿಮ್ಮಿಯೊಂದು ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿರುವ ಪರಿಣಾಮ ಕಾಲು ಸೇತುವೆಯ ಅಡಿಭಾಗದಲ್ಲಿ ಬಿರುಕು ಬಿಟ್ಟಿದೆ. ಇದರಿಂದ ಪಟ್ಟೆ-ಮೋಡಿಕೆ ಸಂಪರ್ಕ ರಸ್ತೆಯು ಕಡಿತವಾಗುವ ಭಯ ಇಲ್ಲಿನ ಜನರದ್ದು. ಉರುಳಿ ಬಿದ್ದಿರುವ ಮರ ಹಾಗೂ ಅಣ್ಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿರುವ ಮರದ ದಿಮ್ಮಿ ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಲು ತಕ್ಷಣ ಸೂಕ್ತ ಕ್ರಮ ಕೖೆಗೊಳ್ಳಬೇಕು. ಇಲ್ಲದಿದಲ್ಲಿ ಸಂಪರ್ಕ ಕಡಿತಗೊಳ್ಳುವುದು ಖಚಿತ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿನಗಳು ಗಮನಹರಿಸಿ ಸೂಕ್ತ ಕ್ರಮ ಕೖೆಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ

ಸುಳ್ಯಪದವು ನವೋದಯ ಪ್ರೌಢಶಾಲೆಯಲ್ಲಿ ಆಗಿನ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ರವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂದರ್ಭದಲ್ಲಿ ಈ ಭಾಗದ ಸಾರ್ವಜನಿಕರು ಖುದ್ದಾಗಿ ಬಂದು ಶಿಥಿಲಗೊಂಡು ಉಪಯೋಗವಿಲ್ಲದ ಅಣ್ಣೆಕಟ್ಟು ತೆರವುಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಅವರು ತಕ್ಷಣ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವರನ್ನು ಕರೆದು ಕೃಷಿಕರಿಗೆ ತೊಂದರೆ ಉಂಟಾಗುವ ಈ ಅಣ್ಣೆಕಟ್ಟನ್ನು ಕೂಡಲೇ ತೆರವು ಮಾಡುವಂತೆ ಅದೇಶ ನೀಡಿದ್ದರು. ಆದರೆ ಈವರಗೆ ಆಣ್ಣೆಕಟ್ಟು ತೆರವು ಮಾಡದೆ ಜಿಲ್ಲಾಧಿಕಾರಿ ಅದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದುದರಿಂದ ಇಂದು ಪಟ್ಟೆ-ಮೋಡಿಕೆ ಸಂಪರ್ಕ ಕಡಿತದ ಭೀತಿಗೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತಿಕೂಳ್ಳಬೇಕಾದ ಅನಿವಾರ್ಯತೆ ಇದೆ.

ಪಟ್ಟೆ-ಮೋಡಿಕೆ ಸಂಪರ್ಕ ರಸ್ತೆಯ ಈ ಕಾಲು ಸೇತುವೆಯಲ್ಲಿ ಪಕ್ಕದ ಪಟ್ಟೆ ವಿದ್ಯಾ ಸಂಸ್ಥೆ ಹಾಗೂ ಇತರ ಶಾಲಾ ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಹತ್ತಿರದ ರಸ್ತೆ ಇದಾಗಿದೆ. ಈ ಕಾಲು ಸೇತುವೆಯ ಇಕ್ಕಡೆಯ ತಡೆಗೋಡೆ ಮುರಿದು ಹೋಗಿದ್ದು ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಲು ಸೇತುವೆ ದುರಸ್ಥಿ ಪಡಿಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸ್ಪಂದನೆ ದೊರೆಯದ ಕಾರಣ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಸ್ವತಃ ವಿದ್ಯಾ ಸಂಸ್ಥೆ ವತಿಯಿಂದ ಬೇಲಿ ಹಾಕುವ ಕೆಲಸ ಒಂದೊಮ್ಮೆ ನಡೆಸುವ ಪ್ರಸಂಗ ಬಂದಿತ್ತು.
ಪಟ್ಟೆ-ಮೋಡಿಕೆ ಕಾಲು ಸೇತುವೆ ಪಕ್ಕದಲ್ಲಿ ಮರವೊಂದು ಬೇರು ಸಮೇತ ಉರುಳಿ ಬಿದ್ದು ಕಾಲು ಸೇತುವೆ ಬಿರುಕು ಉಂಟಾಗಿದ್ದು, ಮಳೆಗಾಲ ಮುಂಚಿತವಾಗಿ ಅನುಪಯುಕ್ತವಾದ ಕಿಂಡಿ ಅಣೆಕಟ್ಟನ್ನು ತೆರವು ಮಾಡಿ ಕಾಲು ಸೇತುವೆ ದುರಸ್ಥಿ ಮಾಡಬೇಕು. ಇಲ್ಲದೆ ಹೋದಲ್ಲಿ ಈ ಭಾರಿ ಸೇತುವೆ ಮುರಿದು ಸಂಪರ್ಕ ಕಡಿತಗೊಳ್ಳುವುದು ನಿಶ್ಚಿತ
ಶಶಿಧರ್ ಪಟ್ಟೆ,
ರಿಕ್ಷಾ ಚಾಲಕ