ನೆಲ್ಯಾಡಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿ ಹಿಂದೂಗಳನ್ನು ಹತ್ಯೆಗೈದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ವಿರುದ್ಧ ಭಾರತಿಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಇದರ ಸವಿ ನೆನಪಿಗಾಗಿ ಟೀಮ್ ಸಿಂಧೂರ ನೆಲ್ಯಾಡಿ ಅನ್ನುವ ಸಂಘಟನೆ ನೆಲ್ಯಾಡಿಯಲ್ಲಿ ರಚಿಸಲಾಗಿದೆ.
ಇದರ ಉದ್ಘಾಟನೆ ಹಾಗೂ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಸಂಘಟನೆಯ ಸಂಚಾಲಕರಾಗಿ ಶೀನಪ್ಪ ಗೌಡ ಬರಮೇಲು, ಅಧ್ಯಕ್ಷರಾಗಿ ತಿಮ್ಮಪ್ಪ ಗೌಡ ಬಾಯ್ತ್ರೋಡಿ, ಉಪಾಧ್ಯಕ್ಷರಾಗಿ ಪುರಂದರ ಗೌಡ ಪಟ್ಟೆಮಜಲು, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ ರಾಮನಗರ ಆಯ್ಕೆಯಾದರು. ಇದೇ ಸಂಘಟನೆಯ ಸದಸ್ಯರು ಈ ಹಿಂದೆ ನೆಲ್ಯಾಡಿ ಗಣೇಶೋತ್ಸವದ ಸಂದರ್ಭದಲ್ಲಿ ಸ್ವತಃ ನಿರ್ಮಾಣ ಮಾಡಿದ್ದ, ರಾಷ್ಟ್ರ ಜಾಗೃತಿಯ ಆರ್ಟಿಕಲ್ ಗನ್ ಸ್ಥಬ್ದ ಚಿತ್ರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಅಸ್ಪೃಶ್ಯತೆಯಂತ ಕೀಳರಿಮೆಗಳ ಕುರಿತಾಗಿ ಜಾಗೃತಿ ಮೂಡಿಸುವುದು, ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳು, ಶ್ರಮದಾನ, ಅಸಹಾಯಕರಿಗೆ ಸಹಾಯ ಮಾಡುವುದು, ರಕ್ತದಾನ, ತುರ್ತು ಸಂದರ್ಭದಲ್ಲಿ ಸ್ಪಂದಿಸುವುದು, ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಒಂದಷ್ಟು ಉದ್ದೇಶಗಳನ್ನು ಇಟ್ಟುಕೊಂಡು ಈ ಸಂಘಟನೆಯನ್ನು ಸ್ಥಾಪಿಸಲಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
