ಪುತ್ತೂರು: ಕೆದಂಬಾಡಿ ಗ್ರಾಮದ ಮುಂಡಾಳಗುತ್ತು ವರ್ಷಂಪ್ರತಿ ನಡೆಯುವ ಕಾಲಾವಧಿ ನೇಮ ಹಾಗೂ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೈವಗಳ ನೇಮೋತ್ಸವ ಮೇ.17 ಮತ್ತು 18 ರಂದು ನಡೆಯಲಿದೆ.
ಮೇ.17ರಂದು ಬೆಳಿಗ್ಗೆ ಗಣಪತಿ ಹವನ, ಹರಿಸೇವೆ ನಡೆದು ಅನ್ನಸಂತರ್ಪಣೆ ಜರಗಲಿದೆ. ಸಂಜೆ ಗುಳಿಗ ದೈವದ ನೇಮ ನಡೆದು ಬಳಿಕ ಇದ್ಪಾಡಿ ಮಂಜಕೊಟ್ಯದಿಂದ ಶ್ರೀ ದೈವಗಳ ಭಂಡಾರ ಆಗಮಿಸಲಿದೆ. ನಂತರ ಗೋಂದೋಳು ಪೂಜೆ ನಡೆದು ಅನ್ನಸಂತರ್ಪಣೆ ಜರಗಲಿದೆ. ನಂತರ ಧರ್ಮದೈವ ಪಿಲಿಚಾಮುಂಡಿ ದೈವದ ನೇಮ ಜರಗಲಿದೆ.
ಮೇ.18ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮ, ಗ್ರಾಮ ದೈವ ಶಿರಾಡಿ ದೈವದ ನೇಮ ನಡೆದು ಮಧ್ಯಾಹ್ನ ಸಹಭೋಜನ ನಡೆಯಲಿದೆ. ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಬೇಕಾಗಿ ಮುಂಡಾಳಗುತ್ತು ಪ್ರಕಟಣೆ ತಿಳಿಸಿದೆ.