ಪೆರಾಬೆ: ಇತ್ತೀಚೆಗೆ ನಿಧನರಾದ ಪೆರಾಬೆ ಗ್ರಾಮ ಪಂಚಾಯಿತಿ ಕುಂತೂರು 2ನೇ ವಾರ್ಡ್ ಸದಸ್ಯರಾದ ದಿ| ಕೃಷ್ಣ ವೈ ಅವರಿಗೆ ಭಾರತೀಯ ಜನತಾ ಪಾರ್ಟಿ ಕುಂತೂರು 2ನೇ ವಾರ್ಡ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಮೇ.17ರಂದು ಸಂಜೆ ಕುಂತೂರುಪದವು ಹಾಲು ಸೊಸೈಟಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೃತರ ಸಹೋದರರಾದ ಚಂದ್ರಶೇಖರ ಗೌಡ, ಸೀತಾರಾಮ ಗೌಡ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ, ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್, ಕುಂತೂರು ಶಕ್ತಿ ಕೇಂದ್ರ ಪ್ರಮುಖರಾದ ಸುಭೀಕ್ಷಾ ರೈ, ಕುಂತೂರು 2ನೇ ವಾರ್ಡ್ ಅಧ್ಯಕ್ಷರಾದ ನಿತೀಶ್ ಗೌಡ ಏನಾಜೆ, ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಕೆ., ಗ್ರಾಮ ಪಂಚಾಯತ್ ಸದಸ್ಯರಾದ ರಾಜು ಪಿ.ಜಿ., ಪ್ರಮುಖರಾದ ಪದ್ಮನಾಭ ಗೌಡ ಎರ್ಮಾಳ, ವಸಂತ ಕೆದ್ದೊಟ್ಟೆ, ಸೋಮಪ್ಪ ಗೌಡ, ಗಾಯತ್ರಿ, ಸುರೇಶ್ ಕುಂಡಡ್ಕ, ಹರೀಶ್ ಮುಂಡಾಲ, ಸುಂದರ ಕುಂಡಡ್ಕ, ಉಮೇಶ್ ಮಣಿಕ್ಕಳ, ಬಾಲಕೃಷ್ಣ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಅತಿಥಿಗಳು ಕೃಷ್ಣ ವೈ ಅವರ ಸೇವೆಯ ಬಗ್ಗೆ ನೆನಪಿಸಿ ಗುಣಗಾನ ಮಾಡಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.