ಪುತ್ತೂರು: ಮಳೆ ಬಂದರೆ ಸಾಕು ತಿಂಗಳಾಡಿ ಜಂಕ್ಷನ್ ತುಂಬಾ ನೀರು ತುಂಬಿಕೊಳ್ಳುತ್ತಿದ್ದು, ವಾಹನ ಸವಾರರಿಂದ ಹಿಡಿದು ಪಾದಚಾರಿಗಳೂ ಕೂಡ ನಡೆದುಕೊಂಡು ಹೋಗಲು ಸಂಕಷ್ಟಪಡುವಂತಾಗಿದೆ.
ತಿಂಗಳಾಡಿ ಜಂಕ್ಷನ್ನಲ್ಲಿ ಅಳವಡಿಸಿರುವ ಮೋರಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆಯೇ ಹರಿದುಹೋಗುತ್ತಿದ್ದು, ಇದರಿಂದಾಗಿ ರಸ್ತೆ ತುಂಬಾ ನೀರು ತುಂಬಿಕೊಂಡು ವಾಹನ ಸವಾರರು, ಪಾದಚಾರಿಗಳು ಸಂಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಈ ರೀತಿಯ ಪರಿಸ್ಥಿತಿ ಉಂಟಾಗುತ್ತಿದ್ದು, ಮೋರಿಯ ಹೂಳೆತ್ತುವವರು ಯಾರು ಎಂಬುದೇ ಇಲ್ಲಿ ಯಕ್ಷಪ್ರಶ್ನೆಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
