ಪುತ್ತೂರು: ಕೃಷಿ ಇಲಾಖೆಯಲ್ಲಿ ಭತ್ತ ಬಿತ್ತನೆ ಬೀಜ ಹಾಗೂ ಕಪ್ಪು ಟರ್ಪಾಲಿನ್(8*6ಮೀ. ಅಳತೆ) ಪರಿಕರದ ಸೌಲಭ್ಯಗಳನ್ನು ಸಹಾಯಧನದಲ್ಲಿ ಪಡೆದುಕೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಪರಿಕರ ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯಡಿ ಭತ್ತ ಬಿತ್ತನೆ ಬೀಜ ಹಾಗೂ ಕಪ್ಪು ಟರ್ಪಾಲಿನ್(8*6ಮೀ. ಅಳತೆ)ನ್ನು ಶೇಕಡಾ 50%ರಷ್ಟು ಸಹಾಯಧನದಲ್ಲಿ ವಿತರಿಸಲಾಗುವುದು.
ಫಲಾನುಭವಿಗಳು ತಮ್ಮ ಜಾಗದ ಪಹಣಿ, ಪಾಸ್ಪೋರ್ಟ್ ಸೈಜ್ ಫೊಟೋ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ನಕಲು ಪ್ರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದೊಂದಿಗೆ ರೈತ ಸಂಪರ್ಕ ಕೇಂದ್ರ ಪುತ್ತೂರು ಇಲ್ಲಿಗೆ ಸಂಪರ್ಕಿಸುವಂತೆ ರೈತ ಸಂಪರ್ಕ ಕೇಂದ್ರ ಹೋಬಳಿಯ ಕೃಷಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.