ಪುತ್ತೂರು: ಹಜ್ ಯಾತ್ರೆ ಕೈಗೊಳ್ಳಲಿರುವ ಸ್ಪೀಕರ್ ಯು.ಟಿ ಖಾದರ್ ರವರನ್ನು ಇಂಜಿನಿಯರ್ ಸಂಘದಿಂದ ಅವರ ಕಚೇರಿಯಲ್ಲಿ ಸನ್ಮಾನಿಸಿ, ಹಜ್ ಧಾರ್ಮಿಕ ಯಾತ್ರೆಯು ಸುಖಕರವಾಗಿರಲಿ ಎಂದು ಶುಭಹಾರೈಸಲಾಯಿತು.
ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರುಗಳ ಸಂಘದ ರಾಜ್ಯಾಧ್ಯಕ್ಷ ರಾಮಚಂದ್ರ ಎ., ಉಪಕಾರ್ಯದರ್ಶಿ ನಿತೇಶ್ ಹೆಚ್., ಸಂಘಟನಾ ಕಾರ್ಯದರ್ಶಿ ಸುನಿಲ್ ಮಾಂತೆರೋ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.