ಜೆ.ಇ.ಇ. ಮೈನ್ಸ್ 2 ಪ್ರವೇಶ ಪರೀಕ್ಷೆ – ಇಂದ್ರಪ್ರಸ್ಥ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

0

ಉಪ್ಪಿನಂಗಡಿ: 2024-25ರ ಜೆ.ಇ.ಇ ಪ್ರವೇಶ ಪರೀಕ್ಷೆಯ ಬಿ ಪ್ಲಾನಿಂಗ್ ವಿಭಾಗದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಲಾವಣ್ಯ ಕೆ. – 1921 (ಆಲ್ ಇಂಡಿಯ ರ‍್ಯಾಂಕ್),
ಪ್ರಾಪ್ತಿ ಪಿ.ವಿ.- 2650 (ಆಲ್ ಇಂಡಿಯ ರ‍್ಯಾಂಕ್), ಸಾರಾ ನೀಮ – 6466 (ಆಲ್ ಇಂಡಿಯ ರ‍್ಯಾಂಕ್) ಹಾಗೂ ಬಿಆರ್ಕ್ ವಿಭಾಗದಲ್ಲಿ ಅಶ್ವಿನಿ ವಿಲಾಸ್ ಅರ್ಜುನ್- 8550 (ಆಲ್ ಇಂಡಿಯ ರ‍್ಯಾಂಕ್)ಗಳಿಸಿರುತ್ತಾರೆ.

ಲಾವಣ್ಯ ಕೆ. ಅವರು ನೀಲಪ್ಪ ಗೌಡ ಮತ್ತು ಕೆ. ಪದ್ಮಾವತಿ ದಂಪತಿಯ ಪುತ್ರಿ, ಪ್ರಾಪ್ತಿ ಪಿ.ವಿ. ಅವರು ವೀರಪ್ಪ ಗೌಡ ಮತ್ತು ನಳಿನಾಕ್ಷಿ ಕೆ. ದಂಪತಿಯ ಪುತ್ರಿ, ಸಾರಾ ನೀಮ ಅವರು ಕಮಲ್ ಮತ್ತು ಜಮೀಲ ದಂಪತಿಯ ಪುತ್ರಿ. ಅಶ್ವಿನಿ ವಿಲಾಸ್ ಅರ್ಜುನ್ ಅವರು ವಿಲಾಸ್ ಧರ್ಮ ಅರ್ಜುನ್ ಮತ್ತು ವೈಶಾಲಿ ವಿಲಾಸ್ ಅರ್ಜುನ್ ದಂಪತಿಯ ಪುತ್ರಿ.


ಈ ಫಲಿತಾಂಶವು ಅತ್ಯಂತ ಉತ್ತಮವಾಗಿದ್ದು, ಇದು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಹಿರಿಮೆಗೆ ಮತ್ತೊಂದು ಗರಿಯಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ ಅರ್ಹತೆಯನ್ನು ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್. ಕೆ. ಪ್ರಕಾಶ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here