ಪುತ್ತೂರು: ಕಳೆದ ಎರಡು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರಸಭಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾನಿಯುಂಟಾಗಿದೆ.

ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿ ಧರೆ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಕರ್ಕುಂಜ ನೆಲ್ಲಿಗುಂಡಿಯಲ್ಲಿ ಮಧುಸೂದನ್ರವರ ಮನೆ ಹಿಂಬದಿಯ ಗುಡ್ಡ ಕುಸಿದು ಅಪಾರ ಹಾನಿ ಉಂಟಾಗಿದೆ. ಬಪ್ಪಳಿಗೆಯಲ್ಲಿ ರಸ್ತೆ ಬದಿ ಕುಸಿತ ಹಾಗೂ ಕೆರೆಮೂಲೆಯಲ್ಲಿ ಧರೆ ಕುಸಿತ ಮನೆಗೆ ಹಾನಿಯುಂಟಾಗಿದೆ.

ಹಾನಿಗೊಂಡ ಸ್ಥಳಗಳಿಗೆ ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಹಾಗೂ ಸ್ಥಾಯಿ ಸಮಿತಿ ಸದಸ್ಯ ಸುಂದರ ಪೂಜಾರಿ ಬಡಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.