ನಿಡ್ಪಳ್ಳಿ: ಪಾಣಾಜೆ ಗ್ರಾಮದ ರಣಮಂಗಲ ದೇವಸ್ಥಾನ ಹೋಗುವ ರಸ್ತೆಯ ನೆಲ್ಲಿತ್ತಿಮಾರಿನಿಂದ ತೂಂಬಡ್ಕವರೆಗೆ ರಸ್ತೆ ಬದಿ ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆದು ಶ್ರಮದಾನದ ಮೂಲಕ ಗ್ರಾಮಸ್ಥರು ಮೇ.25 ರಂದು ದುರಸ್ತಿ ಗೊಳಿಸಿದರು.
ಚರಂಡಿಯಲ್ಲಿ ಹೂಳು ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದನ್ನು ಮನಗಂಡ ಆ ಭಾಗದ ಸುಮಾರು 15 ಯುವಕರು ಒಟ್ಟು ಸೇರಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಶ್ರಮದಾನವನ್ನು ಮಾಡಿದರು.