





ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಕಾವು ಮಿನೋಜಿ ಕಲ್ಲು ಐತ್ತಪ್ಪ ನಾಯ್ಕ್ ಹಾಗೂ ಮನೆಯವರು ಮತ್ತು ಮಡಿಕೇರಿ ಭಗವತಿ ನಗರ ರುಜಿತ್ ಭವ್ಯ ಶೆಟ್ಟಿ ಮತ್ತು ಮನೆಯವರ ಸೇವಾರ್ಥವಾಗಿ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರವದಲ್ಲಿ ಮೇ.31ರಂದು ಹರಕೆಯ ನೇಮೋತ್ಸವವು ಜರಗಿತು.


ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕುಂಡ ಮೊಗೇರ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವ ನಾಥ ಮಣ್ಣಾಪು, ಸುಜೀರ್ ಶೆಟ್ಟಿ ನುಳಿಯಾಲು ಸಹಿತ ಹಲವರು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.







 
            
