ಪುತ್ತೂರು: ಹಾರಾಡಿ ಸರಕಾರಿ ಮಾದರಿ ಉ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಸುಮಾರು 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೈಯಲ್ಲಿ ಬಣ್ಣ ಬಣ್ಣದ ಬೆಲೂನ್‌ಗಳನ್ನೂ ಹಿಡಿದು ಮೆರವಣಿಗೆಯ ಮೂಲಕ ಶಾಲೆಯ ಅಂಗಣಕ್ಕೆ ಆಗಮಿಸಿದರು. ಅವರನ್ನು ಆರತಿ ಎತ್ತಿ ಹೂಮಳೆ ಸುರಿದು ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ನಗರಸಭಾ ಕೌನ್ಸಿಲರ್ ಪ್ರೇಮಲತಾ ನಂದಿಲ, ಎಸ್‌ಡಿಎಂಸಿ ಅಧ್ಯಕ್ಷೆ ಸುಲೋಚನಿ, ಮುಖ್ಯಶಿಕ್ಷಕ ಕೆ.ಕೆ ಮಾಸ್ತರ್, ನಗರಸಭಾ ಸದಸ್ಯ ದಿನೇಶ್ ಶೇವಿರೆ, ಹಿರಿಯ ಶಿಕ್ಷಕಿ ಗಂಗಾವತಿ ಮತ್ತು ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.