ಇಳಂತಿಲ: ಧರೆ ಕುಸಿದು ಮನೆಗಳಿಗೆ ಹಾನಿ

0


ಉಪ್ಪಿನಂಗಡಿ: ಭಾರೀ ಮಳೆಗೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ಜೋಗಿಬೆಟ್ಟುವಿನ ರಝಾಕ್ ಹಾಗೂ ಸಿದ್ದೀಕ್ ಅವರ ಮನೆ ಮೇಲೆ ಧರೆ ಕುಸಿದು ಬಿದ್ದಿದ್ದು, ಇದರಿಂದ ಸಿದ್ದೀಕ್ ಅವರ ಮನೆಗೆ ಹಾನಿಯಾಗಿದೆ.


ಮಸೀದಿ ಬಳಿ ಈ ಸಹೋದರರಿಬ್ಬರ ಮನೆಯು ಅಕ್ಕಪಕ್ಕದಲ್ಲಿದ್ದು, ಮನೆಯ ಹಿಂಬದಿಯ ಧರೆ ಮಳೆಗೆ ಜರಿದು ಬಿದ್ದಿದೆ. ಇದರಿಂದ ಮಣ್ಣು, ಕಲ್ಲು ಮಿಶ್ರಿತ ನೀರು ಮನೆ ಹಾಗೂ ಮನೆಯ ಆವರಣದೊಳಗೆ ನುಗ್ಗಿದೆ. ಸ್ಥಳಕ್ಕೆ ಇಳಂತಿಲ ಗ್ರಾಮದ ಆಡಳಿತಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here