





ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಪುತ್ತಿಗೆ ಕಾರ್ಯಕ್ಷೇತ್ರ ವ್ಯಾಪ್ತಿಯ ಪುತ್ತಿಗೆ ಸರಕಾರಿ ಕಿ.ಪ್ರಾ.ಶಾಲೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2025-26ನೇ ಸಾಲಿನ ಜ್ಞಾನದೀಪ ಕಾರ್ಯಕ್ರಮದಡಿ ಶುದ್ಧ ನೀರು ಪೀಲ್ಟರ್ ಅಳವಡಿಕೆಗೆ ಬಂದ ಬೇಡಿಕೆಯಂತೆ ಶ್ರೀ ಧರ್ಮಸ್ಥಳ ಕ್ಷೇತ್ರದ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ರೂ 20 ಸಾವಿರ ಅನುದಾನ ಮಂಜೂರಾತಿ ಮಾಡಿದ್ದಾರೆ.


ಈ ಮಂಜೂರಾತಿ ಪತ್ರವನ್ನು ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ರವರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸೂರಪ್ಪ ಗೌಡ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರು ಮಧೂಸೂದನ್ ಕೆ.ಎ. ಮತ್ತು ಶಿಕ್ಷಕವೃಂದ, ಯೋಜನೆಯ ಮೇಲ್ವಿಚಾರಕ ಆನಂದ ಡಿ.ಬಿ., ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಚೇತನ, ಸೇವಾ ಪ್ರತಿನಿಧಿ ಪ್ರಿಯಲತಾ ಉಪಸ್ಥಿತರಿದ್ದರು.







            







