ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವ ಬಗ್ಗೆ ವರದಿಯಾಗಿದೆ.
ಯಾರೋ ಕಿಡಿಗೇಡಿಗಳು ರಾಮಚಂದ್ರ ಪುತ್ತೂರು (Ramachandra Puttur) ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದು, ಅನೇಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆನ್ನಲಾಗಿದೆ. ಸುಮಾರು 9 ಮಂದಿ ಈ ಫ್ರೆಂಡ್ ರಿಕ್ವೆಸ್ಟನ್ನು ಮಾನ್ಯ ಮಾಡಿದ್ದು ಅವರಿಗೆ ಮೆಸೆಂಜರ್ ಮೂಲಕ “ನನಗೆ ಸಹಾಯ ಬೇಕು” “ನಿಮ್ಮಲ್ಲಿ ಗೂಗಲ್ ಪೇ, ಪೇಟಿಎಮ್ ಇದೆಯೇ” ಎಂದು ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆನ್ನಲಾಗಿದೆ.
ಕಡಬದ ಜಯರಾಜ್ ಎಂಬವರಿಗೆ ಫ್ರೆಂಡ್ ರಿಕ್ವೆಸ್ಟನ್ನು ಕಳುಹಿಸಿ ಬಳಿಕ ಹಣಕ್ಕೆ ಬೇಡಿಕೆಯಿಟ್ಟಿದ್ದು, ಅವರು ಅಮಳ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ. ಇದೊಂದು ನಕಲಿ ಖಾತೆಯಾಗಿದ್ದು ದಯವಿಟ್ಟು ಯಾರೂ ಈ ಖಾತೆ ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್‌ಗೆ ಸ್ಪಂದಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.