ನಿಡ್ಪಳ್ಳಿ: ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇದರ ವಿದ್ಯಾರ್ಥಿ ಸಂಘದ ನಾಯಕನಾಗಿ 10ನೇ ತರಗತಿಯ ಚೈತ್ರೇಶ್, ಉಪ ನಾಯಕನಾಗಿ 9ನೇ ತರಗತಿಯ ಲೋಹಿತ್ ಕುಮಾರ್, ವಿರೋಧ ಪಕ್ಷದ ನಾಯಕಿಯಾಗಿ 10ನೇ ತರಗತಿಯ ಸ್ವಾತಿ.ಡಿ ಆಯ್ಕೆಗೊಂಡಿದ್ದಾರೆ.
ಗೃಹಮಂತ್ರಿಯಾಗಿ ರೋಹಿತ್, ವಿದ್ಯಾಮಂತ್ರಿಯಾಗಿ ಧನ್ಯಶ್ರೀ, ಕ್ರೀಡಾಮಂತ್ರಿಯಾಗಿ ಕಾವ್ಯ, ಆರೋಗ್ಯಮಂತ್ರಿಯಾಗಿ ಶ್ರೀಯಾ, ಸಾಂಸ್ಕೃತಿಕಮಂತ್ರಿಯಾಗಿ ರಕ್ಷಿತಾ, ನೀರಾವರಿಮಂತ್ರಿಯಾಗಿ ಅನ್ವಿತ್, ಆಹಾರ ಮಂತ್ರಿಯಾಗಿ ಸುಪ್ರಿತಾ, ಕೃಷಿ ಮಂತ್ರಿಯಾಗಿ ಅರ್ಪಿತಾ, ರಕ್ಷಣಾ ಮಂತ್ರಿಯಾಗಿ ಹೇಮಂತ್, ವಾರ್ತಾ ಮಂತ್ರಿಯಾಗಿ ಮೊಕ್ಷಿತ್, ಸ್ವಚ್ಚತಾ ಮಂತ್ರಿಯಾಗಿ ಗಗನ್, ಶಿಸ್ತು ಮಂತ್ರಿಯಾಗಿ ವೀಕ್ಷಾ, ಸಮಯ ಪರಿಪಾಲನೆ ಆಫ್ನಾ, ವಿದ್ಯುತ್ ಮಂತ್ರಿಯಾಗಿ ತ್ರಿಶಾಂತ್, ಸ್ಪೀಕರ್ ಸ್ವಾಲಿಹ ಇವರನ್ನು ಆಯ್ಕೆ ಮಾಡಲಾಯಿತು.
ಇವಿಎಂ ಅಪ್ ನಲ್ಲಿ ಮತದಾನದ ಮೂಲಕ ಆಯ್ಕೆ ನಡೆಸಲಾಯಿತು. ಮುಖ್ಯ ಶಿಕ್ಷಕ ವಿಜಯ ಕುಮಾರ್.ಎಂ ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಕೆ.ವಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಹಶಿಕ್ಷಕರಾದ ಸಿಂಧೂ ವಿ.ಕೆ, ಮಂಜುಳಾ ಭಟ್, ಉಮಾ ಪಿ.ಅರ್, ವಿನುತಾ ಸಿ.ಕೆ, ನಳಿನಿ.ಜಿ ಸಹಕರಿಸಿದರು.