ಜೂ.22: ಮುಳಿಯ ಗೋಲ್ಡ್ ಡೈಮಂಡ್ಸ್ ವತಿಯಿಂದ ಅಪ್ಪ-ಮಗ ಅಪ್ಪ-ಮಗಳು ಅನುಬಂಧದ ಕಾರ್ಯಕ್ರಮ

0

ಪುತ್ತೂರು: ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ Father’s Day ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂ.22ರಂದು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ಶೀರ್ಷಿಕೆಯಡಿ ಅಪ್ಪ-ಮಗ ಹಾಗೂ ಅಪ್ಪ-ಮಗಳು ಎಂಬ ವಿಶೇಷ ರೀತಿಯ ಅನುಬಂಧದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳು ಈ ಕಾರ್ಯಕ್ರಮದ ವಿಶೇಷತೆಗಳಾಗಿವೆ.


ಹಾಗೆಯೇ ಅಪ್ಪ-ಮಕ್ಕಳ ಅನುಬಂಧದ ಕುರಿತಾಗಿ ಹೊಸದಾಗಿ ಮಾಡಿದ 30 ಸೆಕೆಂಡುಗಳ ವೀಡಿಯೋವನ್ನು 9353030916 ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ.
22 ರಂದು ಸಂಜೆ 4 ಗಂಟೆಯಿಂದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ಎಲ್ಲ ಶಾಖೆಗಳಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕುಟುಂಬ ಸಮೇತರಾಗಿ ಬಂದು ಆನಂದಿಸುವ ವರ್ಣಮಯ ಸಮಯ ಇದಾಗಿದೆ. ಇದರ ಜತೆಗೆ ಖ್ಯಾತ ಮಾತುಗಾರ ವಿಠಲ್ ನಾಯಕ್ ಇವರಿಂದ ನಗೆ-ನುಡಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here