ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮೇನಾಲ ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಯೋಗ ಕಾರ್ಯಕ್ರಮವನ್ನು ಜೂ.21ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಚಿತ್ರಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಯೋಗ ಅಭ್ಯಾಸದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಜುಬೈದಾ ಮತ್ತು ಮಮತಾ, ಆಡಳಿತಾಧಿಕಾರಿ ಅಬ್ದುಲ್ ರಹ್ಮಾನ್, ಮ್ಯಾನೇಜರ್ ಖದೀಜ ರೈಹಾನ ಹಾಗೂ ಆಡ್ಮಿನ್ ಆಫೀಸರ್ ನಾಸಿರ್ ಉಪಸ್ಥಿತರಿದ್ದರು.

ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ದೈನಂದಿನ ಜೀವನದಲ್ಲಿ ಯೋಗ ಅಭ್ಯಾಸದಿಂದ ಶಾರೀರಿಕ ಹಾಗೂ ಮಾನಸಿಕ ಆರೈಕೆ ಹೇಗೆ ಸಾಧ್ಯವೆಂಬುದನ್ನು ನುಡಿದರು.

LEAVE A REPLY

Please enter your comment!
Please enter your name here