ಇಂದಿನ ಕಾರ್ಯಕ್ರಮ ( 01-07-2025)

0

ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ಸಿಟಿಯ ನೂತನ ಪದಾಧಿಕಾರಿಗಳ ಪದ ಪ್ರದಾನ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೆಳಿಗ್ಗೆ ೧೦ಕ್ಕೆ ನಿಡ್ಪಳ್ಳಿ ಗ್ರಾ.ಪಂ, ಮಧ್ಯಾಹ್ನ ೧೨ಕ್ಕೆ ಪಾಣಾಜೆ, ಅಪರಾಹ್ನ ೩ಕ್ಕೆ ರೆಂಜ ಜಂಕ್ಷನ್, ಸಂಜೆ ೫ಕ್ಕೆ ಸಂಪ್ಯದಲ್ಲಿ ಬಿಜೆಪಿ ಸುಳ್ಳುಗಾರರಿಗೆ ಉತ್ತರ-ವಲಯ ಭೇಟಿ ಜನಜಾಗೃತಿ ಸಭೆ
ವಿಟ್ಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳಿಗ್ಗೆ ೧೦ಕ್ಕೆ ಉರಿಮಜಲು ಜಂಕ್ಷನ್, ಮಧ್ಯಾಹ್ನ ೧೨ಕ್ಕೆ ಕುಂಡಡ್ಕ ಶೆಡ್ ಬಳಿ, ಅಪರಾಹ್ನ ೩ಕ್ಕೆ ಸ್ಮಾರ್ಟ್ ಸಿಟಿ ಬಳಿ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ-ಜನಜಾಗೃತಿ ಸಭೆ
ಪುತ್ತೂರು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸಂಜೆ ೪ರಿಂದ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಯಕ್ಷಗಾನ ತಾಳಮದ್ದಳೆ-ಶಲ್ಯ ಸಾರಥ್ಯ
ಪುತ್ತೂರು ಯಂ. ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆ ೯.೪೫ಕ್ಕೆ ಬಂಟರ ಸಂಘ ಪುತ್ತೂರು ತಾಲೂಕಿನ ವತಿಯಿಂದ “ಪೆರ್ಮೆದ ಬಂಟೆರ್ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು ಶ್ರೀ ಧರ್ಮಸ್ಥಳ ಕಟ್ಟಡದ ಯೋಜನಾ ಕಛೇರಿಯ ಸಭಾಭವನದಲ್ಲಿ ಮಧ್ಯಾಹ್ನ ೨ಕ್ಕೆ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ತರಬೇತಿ, ವಾರ್ಷಿಕ ಸಭೆ
ಪುತ್ತೂರು ಎಂ.ಟಿ. ರಸ್ತೆಯಲ್ಲಿರುವ ಎಸ್.ಕೆ.ಸಿ.ಎಂ.ಎಸ್ ಕಟ್ಟಡದಲ್ಲಿರುವ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ ೧೦ಕ್ಕೆ ರೈತರಿಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ
ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಟೀಮ್ ಕಲ್ಲೇಗ ಟೈಗರ್ಸ್‌ನಿಂದ ಅಕ್ಷಯ್ ಕಲ್ಲೇಗ ಜನ್ಮದಿನದ ಪ್ರಯುಕ್ತ ಮಂಜಲ್ಪಡ್ಪು ಬಿ.ಇ.ಎಂ. ಹಿ.ಪ್ರಾ ಶಾಲೆಗೆ ಕಂಪ್ಯೂಟರ್ ಕೊಡುಗೆ, ಇತರ ಸರ್ಕಾರಿ ಶಾಲೆಗಳಿಗೆ ಸೀಲಿಂಗ್ ಫ್ಯಾನ್, ಪುಸ್ತಕ ವಿತರಣೆ
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಕೇಂದ್ರ ಕಚೇರಿಯ ಸಂಗಮ ಕೃಪಾ ಸಭಾಭವನದಲ್ಲಿ ಸಂಜೆ ೫.೩೦ರಿಂದ ಯೋಗ ತರಬೇತಿ ಶಿಬಿರ
ಅರ್ಕ ಮಹಾದೇವಿ ಭಜನಾ ಮಂದಿರದಲ್ಲಿ ಸಂಜೆ ೪.೩೦ಕ್ಕೆ ಕೊಡಿಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಂಚಾರಿ ಹಾಲು ಸಂಗ್ರಹ ವಾಹನಕ್ಕೆ ಚಾಲನೆ
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೧೨ಕ್ಕೆ ತಿಂಗಳ ಶುದ್ದ ಷಷ್ಠಿ ಪೂಜೆ, ಅನ್ನಸಂತರ್ಪಣೆ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಷಷ್ಠಿ ಪೂಜೆ, ಅನ್ನಸಂತರ್ಪಣೆ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಧ್ಯಾಹ್ನ ನಂದಿಲ ಎನ್. ಶಿವಾನಂದ ನಾಕ್‌ರವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here