ಬಡಗನ್ನೂರು: ಪಡುಮಲೆ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜೂ.29ರಂದು ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿದಿಯಲ್ಲಿಟ್ಟು ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರು ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೖೆಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಸದಸ್ಯರಾದ ಉದಯ ಕುಮಾರ್ ಪಡುಮಲೆ, ಪುರಂದರ ರೖೆ ಕುದ್ಕಾಡಿ, ಶ್ರೀನಿವಾಸ ಗೌಡ ಕನ್ನಯ ಗೋಪಾಲ ನಾಯ್ಕ ದೊಡ್ಡಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಪ್ರಭಾಕರ ಗೌಡ ಕನ್ಶಯ, ಸಮಿತಿಯ ಗೌರವಾಧ್ಯಕ್ಷೆ ವೀಣಾ ಭಟ್ ಚಂದುಕೂಡ್ಲು, ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಉಪಾಧ್ಯಕ್ಷ ಸುಲೋಚನಾ ನೇರ್ಲಂಪಾಡಿ, ಕಾರ್ಯದರ್ಶಿ ಭಾರತಿ ರೈ ಕುದ್ಕಾಡಿ, ಜೊತೆ ಕಾರ್ಯದರ್ಶಿ ವಿದ್ಯಾಶ್ರೀ ಎಸ್ (ಶ್ರೀಶಾವಾಸವಿ ತುಳುನಾಡ್), ಕೋಶಾಧಿಕಾರಿ ರಮಾಕಾಂತಿ ರೈ ಬೋಳಂಕೂಡ್ಲು, ಗೌರವ ಸಲಹೆಗಾರರಾದ ಶಂಕರಿ ಪಟ್ಟೆ, ಶ್ರೀಮತಿ ಕೆ ಕನ್ನಡ್ಕ, ಸುಧಾ ಎಸ್ ರೈ ಕಟ್ಟಾವು, ಉದಯಲಕ್ಷ್ಮೀ ಭಟ್ ಮೈಂದನಡ್ಕ, ಸಂಚಾಲಕರಾದ ರೇಖಾ ನಾಗರಾಜ್ ಪಟ್ಟೆ, ಯಶೋಧಾ ಬಡಕ್ಕಾಯೂರು, ವಿನೋದಾ ರೈ ಸೇನೆರೆಮಜಲು, ಸುನೀತಾ ರೈ ಮೇಗಿನಮನೆ, ಸಹಸಂಚಲಕರಾದ ಶಾಂತಾ ಭಟ್ ಸಣಂಗೋಲು, ಜಯಶೀಲ ಪೆರಿಗೇರಿ, ಪ್ರೇಮಾ ತಿಮ್ಮಪ್ಪ ಪಾಟಾಳಿ ಮೈಂದನಡ್ಕ, ವಿಜಯಲಕ್ಷ್ಮಿ ಮೈಂದನಡ್ಕ, ಲತಾ ಕಟ್ಟಾವು, ದಿವ್ಯ ಕೆ, ರೇಖಾ ಮೈಂದನಡ್ಕ, ಹಾಗೂ ಸ್ಥಳೀಯರಾದ ಸುಬ್ಬಯ್ಯ ರೖೆ ಹಲಸಿನಡಿ, ಮಣಿತ್ ರೖೆ ಕುದ್ಕಾಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.