ಕ್ಯಾಂಪ್ಕೋದಿಂದ ಆರ್ಥಿಕ ನೆರವು

0

ನೆಲ್ಯಾಡಿ: ಕ್ಯಾಂಪ್ಕೋ ಸಂಸ್ಥೆಯ ನೆಲ್ಯಾಡಿ ಶಾಖೆಯ ಸಕ್ರಿಯ ಸದಸ್ಯ ಮಹೇಶ ಕೆ.ಇವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಮಂಜೂರಾದ 3 ಲಕ್ಷ ರೂ. ಆರ್ಥಿಕ ನೆರವಿನ ಸಹಾಯಧನದ ಚೆಕ್ ಹಸ್ತಾಂತರ ಕಾರ್ಯಕ್ರಮ ಜು.3ರಂದು ನೆಲ್ಯಾಡಿ ಶಾಖೆಯಲ್ಲಿ ನಡೆಯಿತು.


ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಸಹಾಯಧನದ ಚೆಕ್ ಅನ್ನು ಫಲಾನುಭವಿ ಮಹೇಶ ಕೆ.ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಶೆಟ್ಟಿ, ನೆಲ್ಯಾಡಿ ಶಾಖೆಯ ಪ್ರಬಂಧಕ ಪ್ರಥಮ್ ಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here