ರಾಮಕುಂಜ: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ 2024-25ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಮೂವರು ವಿದ್ಯಾರ್ಥಿನಿಯರು ತೇರ್ಗಡೆಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿದ್ದಾರೆ.

ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ರತ್ನಾಕರ ಪೂಜಾರಿ ಮತ್ತು ಪುಷ್ಪಾವತಿ ದಂಪತಿ ಪುತ್ರಿ ತನ್ವಿ ಕೆ., ಹಿರಿಂಜ ಚಂದ್ರಶೇಖರ ಗೌಡ ಮತ್ತು ನೀಲಾವತಿ ದಂಪತಿ ಪುತ್ರಿ ಜೀವಿಕಾ ಹೆಚ್.ಸಿ.,ಹಾಗೂ ಕದ್ರ ನಾರಾಯಣ ಪೂಜಾರಿ ಮತ್ತು ಮಾಲತಿ ಅವರ ಪುತ್ರಿ ಜ್ಯೋತಿಕಾ ಎನ್.ಕೆ. ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿದ್ದಾರೆ.