ನೆಲ್ಯಾಡಿ: ಉಜಿರೆಯ ಎಸ್.ಡಿ.ಎಂ ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲದ ಪ್ರತಿಜ್ಞಾ ವಿಧಿ ಸಮಾರಂಭ ಜೂ.28ರಂದು ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯಾಗಿ ಶಾಲಾ ಮುಖ್ಯಶಿಕ್ಷಕರಾದ ಎ.ಲಕ್ಷ್ಮಣ ಗೌಡ ಅವರು ಪ್ರಮಾಣವಚನ ಬೋಧಿಸಿ ವಿವಿಧ ಮಂತ್ರಿಗಳ ಕರ್ತವ್ಯಗಳ ಬಗ್ಗೆ ವಿವರಿಸಿದರು. ರಾಜ್ಯಪಾಲರಾಗಿ ಎಲ್ಲಾ ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ನಾಯಕನಾಗಿ ಶ್ರೀಕೃಷ್ಣ 7ನೇ ತರಗತಿ, ಉಪನಾಯಕನಾಗಿ ವಿಕ್ರಮ್ ೬ನೇ ತರಗತಿ, ಸಭಾಪತಿಯಾಗಿ ಶ್ರವಣ್ ವಿ ರೈ, ಶಿಕ್ಷಣ ಮಂತ್ರಿಗಳಾಗಿ ಖುಷಿ ಜೆ.ಎಸ್ ಮತ್ತು ಸಾಹಿತ್ಯ, ಗ್ರಂಥಾಲಯ ಮಂತ್ರಿಗಳಾಗಿ ರೂಪಶ್ರೀ ಮತ್ತು ಧನ್ವಿ, ವಾಹನ ಮಂತ್ರಿಗಳಾಗಿ ಯಶ್ವಿತ್ ಮತ್ತು ಮೋಕ್ಷಿಣಿ, ಆರೋಗ್ಯ ಮಂತ್ರಿಗಳಾಗಿ ಮನಸ್ವಿ ಮತ್ತು ತನ್ವಿ, ಆಹಾರ ಮಂತ್ರಿಗಳಾಗಿ ಪ್ರೇಕ್ಷಿತ್ ಮತ್ತು ವಿಶ್ವಾಸ್, ಸಾಂಸ್ಕೃತಿಕ ಮಂತ್ರಿಗಳಾಗಿ ಭೂಮಿಕಾ ಮತ್ತು ಹಿತಾಶ್ರೀ, ರಕ್ಷಣಾ ಮಂತ್ರಿಯಾಗಿ ಅವಿನ್ಯಾ, ಕ್ರೀಡಾ ಮಂತ್ರಿಗಳಾಗಿ ಪ್ರಸಾದ್ ಮತ್ತು ಅಕ್ಷಯ್, ತೋಟಗಾರಿಕಾ ಮಂತ್ರಿಗಳಾಗಿ ಶೋಭಿತ್ ಮತ್ತು ಯೋಚಿತ್, ನೀರಾವರಿ ಮಂತ್ರಿಗಳಾಗಿ ಮನ್ವಿತ್ ಮತ್ತು ಅನ್ವಿತ್, ವಿರೋಧ ಪಕ್ಷದ ನಾಯಕರಾಗಿ ಹನಿಕ್ಷಾ ಪಿ.ಬಿ ಮತ್ತು ದೀಕ್ಷಾ ಡಿ, ಶೋಧನ ಮಂತ್ರಿಗಳಾಗಿ ನಂದಿತ್ ಮತ್ತು ಸಮರ್ಥ್, ಸ್ವಚ್ಛತಾ ಮಂತ್ರಿಗಳಾಗಿ ಜೀವನ್ ಮತ್ತು ನಿರೀಕ್ಷಾ ಪ್ರಮಾಣ ವಚನ ಸ್ವೀಕರಿಸಿದರು. ಸಹಶಿಕ್ಷಕರಾದ ರಾಜಶೇಖರಪ್ಪ ಸ್ವಾಗತಿಸಿ, ವಂದನಾ ಎಂ.ಎಸ್.ವಂದಿಸಿದರು. ಭಾಗ್ಯಲಕ್ಷ್ಮೀ ಎನ್ ಇವರು ಕಾರ್ಯಕ್ರಮ ನಿರೂಪಿಸಿದರು.