ಪುತ್ತೂರು: ನೃತ್ಯ ಶಿಕ್ಷಕಿ ವಿದುಷಿ ರಶ್ಮಿ ದಿಲೀಪ್ ರೈ ಅವರ ಬೃಂದಾವನ ನಾಟ್ಯಾಲಯ ಇದರ ನೂತನ ಶಾಖೆಯನ್ನು ಪುತ್ತೂರಿನ ಪಡೀಲ್ ಸಮೀಪದ ಎಂ.ಡಿ.ಎಸ್ ಕಟ್ಟಡದಲ್ಲಿ ಆರಂಭಿಸಲಾಯಿತು.
ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಧನ್ಯ ನೃತ್ಯ ತರಗತಿಯನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯ ಕಲಿಕೆಯು ಮಕ್ಕಳ ಮಾನಸಿಕ ವೃದ್ಧಿಗೆ ಸಹಕಾರಿ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಈ ರೀತಿಯ ಇತರೆ ಚಟುವಟಿಕೆಯು ಅವಶ್ಯಕ ಎಂದು ಹೇಳಿದರು.
ನೃತ್ಯ ಶಿಕ್ಷಕಿ ವಿದುಷಿ ರಶ್ಮಿ ದಿಲೀಪ್ ರೈ ಮಾತಾನಾಡಿ, ಪ್ರತಿ ಶನಿವರದಂದು ಮಧ್ಯಾಹ್ನ ನಂತರ ಭರತನಾಟ್ಯ ತರಗತಿಯನ್ನು ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಭರತನಾಟ್ಯದಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಪರೀಕ್ಷೆಗಳನ್ನು ಬರೆಸುವ ತರಬೇತಿಯನ್ನು ಈ ತರಗತಿಯಲ್ಲಿ ನೀಡಲಾಗುವುದು ಎಂಬ ಮಾಹಿತಿಯನ್ನು ನೀಡಿದರು.

ಹಾರಡಿ ಶಾಲೆಯ ಶಿಕ್ಷಕಿ ರಾಜೇಶ್ವರಿ, ಎಂ.ಡಿ.ಎಸ್ ಕಟ್ಟಡದ ಮಾಲೀಕ ಹೆನ್ರಿ, ರವಿಕಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿಲೀಪ್ ರೈ ಕಾರ್ಯಕ್ರಮ ನಿರೂಪಸಿದರು.