ಶ್ರೀಧಾಮ ಜಗತ್ತಿಗೆ ಆದರ್ಶ ಕೇಂದ್ರ: ಮಧುಸೂದನ್ ನಾಯಕ್
ವಿಟ್ಲ: ನೈತಿಕ ಶಿಕ್ಷಣ ದೊಂದಿಗೆ ನೈತಿಕ ಬದ್ಧತೆ ಎಲ್ಲರಲ್ಲಿರಬೇಕು. ಮಾನವೀಯತೆ ಮತ್ತು ಮಾಧವತ್ಯದ ನಡುವೆ ಕಂದಕಗಳು ಸೃಷ್ಠಿಯಾಗುತ್ತಿದೆ.
ಜಗತ್ತು ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮೊಳಗಿನ ಧ್ವೇಷಭಾವ ದೂರವಾಗಿ ಪ್ರೀತಿಭಾವ ಬರಬೇಕು. ಮಾನವನ ಜನ್ಮ ಸಾರ್ಥಕ್ಯ ಪಡೆಯಲು ಗುರುಮುಖ್ಯ. ಭಗವಂತನ ನ್ಯಾಯಲಯದಲ್ಲಿ ಎಲ್ಲರೂ ಸಮಾನರು. ಪ್ರಪಂಚವನ್ನು ಶುದ್ದೀಕರಣ ಮಾಡಲು ಭಗವಂತನ ಅನುಸಂದಾನ ಅಗತ್ಯ. ಕೃತಗ್ನತಾ ಭಾವ ಎಲ್ಲರಲ್ಲಿರಬೇಕು. ಉಪಕಾರ ಸ್ಮರಣೆ ನಮ್ಮಲ್ಲಿರಬೇಕು. ಎಲ್ಲವನ್ನು ಶುದ್ದೀಕರಿಸುವ ಶಕ್ತಿ ಸಂತರಿಗಿದೆ. ಶ್ರೀಧಾಮ ಎಲ್ಲರ ಆತ್ಮಧಾಮವಾಗಿ ಬೆಳಗಲಿ ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಜು.6ರಂದು ಶ್ರೀಧಾಮದಲ್ಲಿ ನಡೆದ ಹದಿನೈದನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮಧುಸೂದನ್ ನಾಯಕ್ ರವರು ಮಾತನಾಡಿ ಮಾಣಿಲ ಶ್ರೀಗಳು ನಮಗಷ್ಟೆ ಸೀಮಿತರಾಗಿಲ್ಲ. ಜಗತ್ತಿನಾಧ್ಯಂತ ಜನಪ್ರಿಯತೆಯನ್ನು ಪಡೆದಿದ್ದಾರೆ.
ಧರ್ಮ ಸಂಸ್ಕೃತಿಯ ಉಳಿವಿಗೆ ಶ್ರೀಗಳ ಕೊಡುಗೆ ಅಪಾರವಾದುದು. ಶ್ರೀಧಾಮ ಜಗತ್ತಿಗೆ ಆದರ್ಶ ಕೇಂದ್ರ. ಕುಗ್ರಾಮವನ್ನು ಸುಗ್ರಾಮವಾಗಿ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಸಮಾಜದ ಬದಲಾವಣೆಗೆ ಶ್ರೀಗಳ ಕೊಡುಗೆ ಅಪಾರ. ನಿಸ್ವಾರ್ಥ ಭಾವದ ಸೇವೆ ನಮ್ಮದಾಗಬೇಕು ಎಂದರು.

ಉದ್ಯಮಿ ಮೋಹನದಾಸ ಪೂಜಾರಿ, ಕನ್ಯಾನ ಶಾಲಾ ಅಧ್ಯಾಪಕರಾದ ಅಶೋಕ್ ಮಾಂಬಾಡಿ, ಮಹಾಲಕ್ಷ್ಮಿಯ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಶ್ರೀಧಾಮ ಮಿತ್ರ ವೃಂದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿ. ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.