ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಜರಗಿದ್ದು, ನೂತನ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಎ.ಎಲ್, ಕೋಶಾಧಿಕಾರಿಯಾಗಿ ಎ.ಶಾಂತ ಕುಮಾರ್ ರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ಜಗನ್ನಾಥ ಅರಿಯಡ್ಕ, ನಿಯೋಜಿತ ಅಧ್ಯಕ್ಷರಾಗಿ ಶಿವರಾಮ ಎಂ.ಎಸ್, ಉಪಾಧ್ಯಕ್ಷರಾಗಿ ಪ್ರದೀಪ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾಗಿ ಅಶ್ರಫ್ ಪಿ.ಎಂ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಬಿ.ಸನತ್ ಕುಮಾರ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಮೊಹಮ್ಮದ್ ರಫೀಕ್ ದರ್ಬೆ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಡಾ.ರಾಮಚಂದ್ರ ಕೆ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಎಂ.ದಿವಾಕರ್ ರೈ, ಯೂತ್ ಸರ್ವಿಸ್ ನಿರ್ದೇಶಕ/ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಡಾ.ರಾಜೇಶ್ ಬೆಜ್ಜಂಗಳ, ಸಾರ್ಜಂಟ್ ಎಟ್ ಆಮ್ಸ್೯/ಫೆಲೋಶಿಪ್ ಆಗಿ ಪ್ರದೀಪ್ ಬೊಳ್ವಾರು, ಬುಲೆಟಿನ್ ಎಡಿಟರ್ ಆಗಿ ವಸಂತ್ ಶಂಕರ್, ಚೇರ್ಮನ್ ಗಳಾಗಿ ಜಗನ್ನಾಥ ಅರಿಯಡ್ಕ(ವೆಬ್ & ಡಿಜಿಟಲ್ ರೋಟರಿ), ಮಹೇಶ್ಚಂದ್ರ ಸಾಲಿಯಾನ್(ಪಲ್ಸ್ ಪೋಲಿಯೊ), ಭಾರತಿ ಎಸ್.ರೈ(ಟೀಚ್, ಸಿ.ಎಲ್.ಸಿ.ಸಿ), ಲಾವಣ್ಯ ನಾಯ್ಕ್(ಟಿ.ಆರ್ಎಫ್), ಜಯಪ್ರಕಾಶ್ ಅಮೈ(ಮೆಂಬರ್ ಶಿಪ್ ಡೆವಲಪ್ಮೆಂಟ್), ನವೀನ್ ಚಂದ್ರ ನಾಯ್ಕ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ವಸಂತ್ ನಾಯಕ್ ಅಜೇರು(ಸಾಂಸ್ಕೃತಿಕ/ಕ್ಲಬ್ ಯಂಗ್ ಲೀಡರ್ಸ್ ಕಾಂಟಾಕ್ಟ್), ಪಿ.ಎಂ ಅಶ್ರಫ್ ಮುಕ್ವೆ(ಹಾಜರಾತಿ), ಕಿರಣ್ ಬಿ.ಎಂ(ವಿನ್ಸ್), ರಮೇಶ್ ರೈ ಬೋಳೋಡಿ(ಎಥಿಕ್ಸ್), ಗಿರೀಶ್ ಕೆ.ಎಸ್(ಪಬ್ಲಿಕ್ ಇಮೇಜ್)ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಹಾಸ ರೈ ಬಿರವರು ಮೂಲತಃ ಕೆಯ್ಯೂರು ಗ್ರಾಮದ ಬೊಳಿಕ್ಕಳ ಕುಕ್ಕೆಬಳ್ಳಿಯವರಾಗಿದ್ದು ಪ್ರಸ್ತುತ ಕಾರ್ಜಾಲು ನಿವಾಸಿಯಾಗಿದ್ದಾರೆ. ಇವರು ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಅಂತರ್ರಾಷ್ಟ್ರೀಯ ಜೇಸಿ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ 1997ರಲ್ಲಿ ಜೇಸಿ ವಲಯ 15ರ ಯಶಸ್ವಿ ವಲಯಾಧ್ಯಕ್ಷರಾಗಿ ಗುರುತಿಸಲ್ಪಟ್ಟಿದ್ದರು.ಉಡುಪಿ ಜಿಲ್ಲೆಯ ಪೊಲಿಪು ಸರಕಾರಿ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಚಂದ್ರಹಾಸ ರೈರವರು ವಿವಿಧ ಕಡೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿರುತ್ತಾರೆ. 2009ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ರಿಜಿಸ್ಟ್ರಾರ್ ಆಗಿ ಜೊತೆಗೆ ಬ್ಯಾರಿ, ಕೊಂಕಣಿ, ಕೊಡವ, ಅರೆಭಾಷೆ ಅಕಾಡೆಮಿಗಳ ರಿಜಿಸ್ಟ್ರಾರ್ ಆಗಿಯೂ ಹೆಚ್ಚುವರಿ ಪ್ರಭಾರದಲ್ಲಿ ಏಕಕಾಲದಲ್ಲಿ ಐದು ಅಕಾಡೆಮಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು.ಕರಾವಳಿ ಉತ್ಸವ, ಅಬ್ಬಕ್ಕ ಉತ್ಸವ, ಅಂತರ್ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ , ನೋಡಲ್ ಅಧಿಕಾರಿಯಾಗಿ ಹೀಗೆ ವಿವಿಧ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿ ಜನಸ್ನೇಹಿ ಅಧಿಕಾರಿ ಎನಿಸಿಕೊಂಡಿದ್ದರು. 2019ರಲ್ಲಿ ನಿಯೋಜನೆ ಅವಧಿ ಪೂರೈಸಿ ಮಾತೃ ಇಲಾಖೆಗೆ ಮರಳಿ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುತ್ತಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಯಪ್ರಕಾಶ್ ಎ.ಎಲ್ ರವರು ಬೊಳ್ವಾರು ಕರ್ಮಲ ನಿವಾಸಿ. ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಇಲ್ಲಿ ವೃತ್ತಿ ಶಿಕ್ಷಣ ಪಡೆದು ಮಾಸ್ಟರ್ ಪ್ಲಾನರಿಯಲ್ಲಿ ಸೂಪರ್ ವೈಸರ್ ಆಗಿ ವೃತ್ತಿಗೆ ಸೇರ್ಪಡೆಗೊಂಡಿರುತ್ತಾರೆ.ಪುತ್ತೂರು ಬಿಲ್ಡ್ ಆರ್ಟ್ ಕನ್ಸ್ಟ್ರಕ್ಷನ್ ಇಂಜಿನಿಯರ್ ಆದ ಕೆ.ಎಚ್ ಅಬ್ದುಲ್ಲರವರೊಂದಿಗೆ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಆಶ್ರಯ ಕನ್ಸ್ಟ್ರಕ್ಷನ್ ಎಂಬ ಹೆಸರಿನ ಸಿವಿಲ್ ಇಂಜಿನಿಯರ್ಸ್ ಆಂಡ್ ಕಾಂಟ್ರಾಕ್ಟರ್ಸ್ ಎಂಬ ಕಛೇರಿಯನ್ನು ದರ್ಬೆಯಲ್ಲಿ ಹೊಂದಿರುತ್ತಾರೆ. ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್(ಪೇಸ್) ನಾಲ್ಕು ವರ್ಷ ನಿರ್ದೇಶಕರಾಗಿ, ಒಂದು ವರ್ಷ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಶಾಂತ ಕುಮಾರ್ ರವರು ಬಂಟ್ವಾಳ ತಾಲೂಕಿನ ಕಡೇಶಿವಾಲಯದವರಾಗಿದ್ದು ಪ್ರಸ್ತುತ ದರ್ಬೆಯಲ್ಲಿ ವಾಸವಾಗಿದ್ದಾರೆ. 1974ರಲ್ಲಿ ಹರಿಹರದ ಸ್ಟುಡಿಯೋ ಒಂದರಲ್ಲಿ ವೃತ್ತಿ ಆರಂಭಿಸಿದರು. 1976ರಲ್ಲಿ ಬಾಂಬೆಗೆ ಹೋಗಿ ಫೊಟೋಗ್ರಾಫಿ ವೃತ್ತಿ ಮುಂದುವರೆಸಿದ ಅವರು 1981ರಲ್ಲಿ ಪುತ್ತೂರಿಗೆ ಹಿಂತಿರುಗಿ ದರ್ಬೆಯಲ್ಲಿ ಶೈನಿ ಸ್ಟುಡಿಯೋ ಸ್ಥಾಪಿಸಿ ಮುನ್ನೆಡೆಸುತ್ತಿದ್ದಾರೆ. ಬಿಲ್ಲವ ಸಂಘ, ಫೊಟೋಗ್ರಾಫಿ ಅಸೋಸಿಯೇಷನ್, ಗಣೇಶೋತ್ಸವ ಸಮಿತಿ, ಬಿರುಮಲೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಕ್ರಿಯರಾಗಿದ್ದಾರೆ. ರೋಟರಿಯಲ್ಲಿ ಸಕ್ರಿಯರಾಗಿದ್ದು ಕ್ರೀಡಾ ಪ್ರೇಮಿಯೂ, ಯೋಗ ಪಟುವೂ ಆಗಿದ್ದಾರೆ.
ಜು.8:ಪದ ಪ್ರದಾನ..
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.8 ರಂದು ನೆಹರುನಗರದ ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ಸಂಜೆ ಜರಗಲಿದೆ. ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಡಾ.ಭಾಸ್ಕರ್ ಎಸ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಲಿದ್ದಾರೆ. ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ರೋಟರಿ ವಲಯ ಸೇನಾನಿ ಉಮಾನಾಥ್ ಪಿ.ಬಿ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಭಾಶ್ ರೈ ಬೆಳ್ಳಿಪ್ಪಾಡಿರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.