ಅಧ್ಯಕ್ಷ ಮೋಹನ್ ಕೆಡೆಂಜಿ ಕಾರ್ಯದರ್ಶಿ ಜಯಶ್ರೀ ವಿಜಯ ಕೆ, ಕೋಶಾಧಿಕಾರಿ ಸತೀಶ್ ಬಲ್ಯಾಯ, ವಲಯ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧ ಮೆದು ಆಯ್ಕೆ
ಪುತ್ತೂರು : ಕರ್ನಾಟಕ ಸ್ಟೇಟ್ ಟೈಲರ್ ಅಶೋಸಿಯೇಷನ್ ಸವಣೂರು ವಲಯದ ಮಹಾಸಭೆಯು ಸವಣೂರು ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸವಣೂರು ವಲಯದ ಅಧ್ಯಕ್ಷರಾದ ಯಶೋಧ ಎನ್ ಮೆದು ವಹಿಸಿದರು ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ ಮಾತನಾಡಿ ಕರ್ನಾಟಕ ಟೈಲರ್ ಅಸೋಸಿಯೇಷನ್ ಸಂಘಟನೆಯನ್ನು ಇನ್ನೂ ಬಲಿಷ್ಠವಾಗಿ ಬೆಳೆಸಬೇಕು ಸರಕಾರದಿಂದ ಸಿಗುವಂತಹ ಸೌಲಭ್ಯಗಳು ಸಂಘಕ್ಕೆ ಬರುವ ಹಾಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ಕರ್ನಾಟಕ ಟೈಲರ್ ಅಸೋಸಿಯೇಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯರಾಮ್ ಬಿಎನ್ ಮಾತನಾಡಿ ನೂತನ ಪದಾಧಿಕಾರಿಗಳ ಮುಖಾಂತರ ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಎಂದರು. ಕರ್ನಾಟಕ ಟೈಲರ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ಉಮಾ ನಾಯಕ್ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಮೋಹನ್ ಕೆಡೆಂಜಿ, ಕಾರ್ಯದರ್ಶಿ ಯಾಗಿ ಜಯಶ್ರಿ ವಿಜಯ ಕೆ, ಕೋಶಾಧಿಕಾರಿಯಾಗಿ ಸತೀಶ್ ಬಲ್ಯಾಯ ಹಾಗೂ ವಲಯ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧ ಎನ್ ಮೆದು ಅವರನ್ನು ಆಯ್ಕೆ ಮಾಡಲಾಯಿತು. ಪುತ್ತೂರು ನಗರ ವಲಯ ಅಧ್ಯಕ್ಷ ಗುಲಾಬಿ ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ ಅನಿಲ, ಹಿರಿಯರಾದ ವೆಂಕಪ್ಪಗೌಡ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶುಭಲಕ್ಷ್ಮಿ ವರದಿ ವಾಚನ ಮಾಡಿದರು. ಹಿರಿಯ ಟೈಲರ್ ಬಾಬು ಗೌಡ ಕುಮಾರಮಂಗಲ ಉಪಸ್ಥಿತರಿದ್ದು, ಜೊತೆ ಕಾರ್ಯದರ್ಶಿಯಾಗಿ ಪ್ರಮೀಳ ಇಡ್ಯಾಡಿ, ಉಪಾಧ್ಯಕ್ಷರಾಗಿ ಪ್ರಮೀಳ, ಸವಣೂರು ಕ್ಷೇತ್ರ ಸಮಿತಿಗೆ ಜಗನ್ನಾಥ ಅಮೈ, ಯಶೋಧ ಎನ್ ಮೆದು, ಶುಭಲಕ್ಷ್ಮಿ, ಮೋಹಿನಿ ಬಂಬಿಲ, ಕುಸುಮಾವತಿ ಕೊಪ್ಪ, ಸುನೀತ ಬಂಬಿಲ, ಸರಸ್ವತಿ ಸಾರಕರೆ ಇವರನ್ನು ಆಯ್ಕೆ ಮಾಡಲಾಯಿತು.
ಶಾರ್ವರಿ ಮೆದು ಮತ್ತು ಜನನಿ ಪ್ರಾರ್ಥಿಸಿದರು. ಜಯಶ್ರೀ, ವಿಜಯ ಕಾರ್ಯಕ್ರಮ ನಿರೂಪಿಸಿ ಮೋಹಿನಿ ಬಂಬಿಲ ಸ್ವಾಗತಿಸಿದರು. ಸತೀಶ್ ಬಲ್ಯಾಯ ಸವಣೂರು ವಂದಿಸಿದರು.