ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭಕ್ತರ ಸಮಿತಿಯ ರಚನೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ್ ಭಟ್ ರವರ ಅಧ್ಯಕ್ಷತೆಯಲ್ಲಿ ಜು.6 ರಂದು ಜರಗಿತು.

ಗೌರವಾಧ್ಯಕ್ಷರಾದ ರಾಮಣ್ಣ ನಾಯ್ಕ್, ವಿಶ್ವನಾಥ ಭಟ್, ಸುಬ್ರಾಯ ಅಂಗಿಂತ್ತಾಯ, ಅಧ್ಯಕ್ಷರಾಗಿ ನಾರಾಯಣ ರೈ ಸಂಪ್ಯದಮೂಲೆ, ಉಪಾಧ್ಯಕ್ಷರಾಗಿ ಮೋಹನ ಪಾಟಾಳಿ, ಪ್ರಶಾಂತ ಆಚಾರ್ಯ, ಹೊನ್ನಪ್ಪ ನಾಯ್ಕ್, ಕಾರ್ಯದರ್ಶಿಗಳಾಗಿ ರೇಖಾನಾಥ್ ರೈ, ಸತೀಶ್ ನಾಯ್ಕ್, ದಿನೇಶ ಗೌಡ, ಸಂತೋಷ್ ರೈ, ಸದಸ್ಯರುಗಳಾಗಿ ಸುಜಾತ ರೈ, ಮಾಲಿನಿ ಹೆಗ್ಡೆ, ಪೂರ್ಣಿಮಾ ನಾಯ್ಕ್, ರಾಜೇಶ್ ರೈ, ವಿಠಲ ಗೌಡ, ಜಯಲಕ್ಷ್ಮಿ, ಸುಮಿತ್ರಾ ವಿಶ್ವಜಿತ್ ಅಮ್ಮುಂಜ, ಸುರೇಶ್ ನಾಯ್ಕ್, ವಿಶ್ವನಾಥ ನಾಯ್ಕ್, ಸುಮಿತ್ರಾ ವಿಠಲ ಅಮ್ಮುಂಜ, ಪುಷ್ಪಾ ಮಲಾರು, ಅವಿನಾಶ್ ರೈ, ಜಗನ್ನಾಥ ಶೆಟ್ಟಿ, ಜಯಶಂಕರ ರೈ ,ನೇಮಾಕ್ಷ ಸುವರ್ಣ ಅಮ್ಮುಂಜ, ಪ್ರವೀಣ ಗೌಡ ಅಮ್ಮುಂಜ, ಸುಕುಮಾರ ಗೌಡ, ಜಯರಾಮ್ ಹೆಗ್ಡೆ, ಕೊರಗಪ್ಪ ರೈ , ಚಂದ್ರ ಸಪಲ್ಯ, ರಾಘವೇಂದ್ರ ಅಂಗಿಂತ್ತಾಯ, ಚಂದ್ರಶೇಖರ ಭಟ್ , ಬ್ರಿಜೇಶ್ ಶೆಟ್ಟಿ ಸಂಪ್ಯದಮೂಲೆ, ಯೋಗೇಶ್ ಅಮ್ಮುಂಜ, ಭಾಸ್ಕರ ಪೊಯ್ಯೆ, ರಿತೇಶ್ ಅಮ್ಮುಂಜ, ಪ್ರಭಾಕರ ರೈ, ಬಾಲಕೃಷ್ಣ ರೈ, ವಿಶ್ವನಾಥ ರೈ, ಸಂಜೀವ ರೈ, ವೇಣಿ ಮಣಿಯಾನಿ, ಸುಜಾತ ಮಣಿಯಾನಿ, ಹರಿಣಾಕ್ಷಿ ಇಡಬೆಟ್ಟು, ರಾಮಕೃಷ್ಣ ಭಟ್, ಉದಯ ಅಂಗಿಂತಾಯ, ಹರಿಪ್ರಸಾದ್ ನೆಕ್ಕರೆ, ಹರೀಶ್ ಸಪಲ್ಯ ಮಾದೇರಿರವರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯಕುಮಾರ್ ಸುವರ್ಣ, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಸದಸ್ಯರಾಗಿ ನಾರಾಯಣ ಮಣಿಯಾಣಿ ಇಡಬೆಟ್ಟು, ನಿರಂಜನ್ ಶೆಟ್ಟಿ ಸಂಪ್ಯ, ರಮೇಶ್ ಭಟ್ ಅಂಗಿಂತ್ತಾಯ, ಹೊನ್ನಪ್ಪ ನಾಯ್ಕ, ಜಿಲ್ಲಾ ಧಾರ್ಮಿಕ ಧತ್ತಿ ಇಲಾಖೆಯ ಜಿಲ್ಲಾಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಗೋಪಾಲ ಪೂಜಾರಿ ಪುತ್ತೂರು ಸಹಿತ ಮತ್ತೀತರರು ಉಪಸ್ಥಿತರಿದ್ದರು. ದೇವಸ್ಥಾನದ ಶನೈಶ್ವರ ಪೂಜಾ ಸಮಿತಿಯ ಗೌರವಾಧ್ಯಕ್ಷ ರೇಖನಾಥ್ ರೈ ಸಂಪ್ಯದಮೂಲೆ ಸ್ವಾಗತಿಸಿ, ವಂದಿಸಿದರು.