- ಪೃಥ್ವೀಶ್ ಡಿ.ಎಸ್ ಹಾಗೂ ಪುಷ್ಕರಿಣಿ ಎಚ್. ಆರ್‌ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ
- ಕಾಲೇಜಿನ ಹಿರಿಯ ವಿದ್ಯಾರ್ಥಿ ಆದಿತ್ಯ ಆರ್ ಬಿಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ
- ಕಾಲೇಜಿನ ಹಿರಿಯ ವಿದ್ಯಾರ್ಥಿ ನಿಧಿರಾಜ್ ಎಂ.ಕೆಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ಉತ್ತೀರ್ಣ
ಪುತ್ತೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಸಿ ಎ ಅಂತಿಮ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಆದಿತ್ಯ ಆರ್ ಬಿ ಉತ್ತೀರ್ಣರಾಗಿದ್ದಾರೆ. ಇವರು ಪುತ್ತೂರಿನ ರಾಜೇಶ್ ಬನ್ನೂರು ಮತ್ತು ಸುಧಾಕುಮಾರಿ ಪಿ.ಕೆ ದಂಪತಿಗಳ ಪುತ್ರನಾಗಿದ್ದು, 2017-2018ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದರು.

ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ನಿಧಿರಾಜ್ ಎಂ.ಕೆ ಉತ್ತೀರ್ಣರಾಗಿದ್ದಾರೆ. ಇವರು ಹಾಸನದ ಗುಲಾಬಿ.ಕೆ ಇವರ ಪುತ್ರನಾಗಿದ್ದು, 2023-2024ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿವ್ಯಾಸಂಗ ಪೂರ್ಣಗೊಳಿಸಿದ್ದರು.
ಅದೇ ರೀತಿಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪೃಥ್ವೀಶ್ ಡಿ.ಎಸ್. ಹಾಗೂ ಪುಷ್ಕರಿಣಿ ಎಚ್. ಆರ್.ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪೃಥ್ವೀಶ್ ಡಿ.ಎಸ್ ಇವರು ಪುತ್ತೂರು ಆರ್ಯಾಪು ಗ್ರಾಮದ ಶಿವರಾಜ್ ಡಿ.ಕೆ ಹಾಗೂ ದೇವಿಕಾ ಡಿ.ಎಸ್ ದಂಪತಿಗಳ ಪುತ್ರ. ಪುಷ್ಕರಿಣಿ ಎಚ್. ಆರ್ ಇವರು ತುಮಕೂರು ಜಿಲ್ಲೆಯ ರಘು ಎಚ್. ಆರ್ ಹಾಗೂ ಪ್ರೇಮಾ ದಂಪತಿಗಳ ಪುತ್ರಿ.
ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.