ಅನಾರೋಗ್ಯದಿಂದಿರುವ ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಶಿವಪ್ಪ ಪೂಜಾರಿಗೆ ಸದಸ್ಯರಿಂದ ಧನಸಹಾಯ ಹಸ್ತಾಂತರ

0

ಪುತ್ತೂರು: ಅನಾರೋಗ್ಯದಿಂದ ಔಷಧೋಪಚಾರಗಳ ಅಗತ್ಯತೆಗೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಪುತ್ತೂರು ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಶಿವಪ್ಪ ಪೂಜಾರಿ ಪಂಜಳರವರಿಗೆ ಸಂಘದ ಸದಸ್ಯರ ಸಹಾಯದಿಂದ ಒಟ್ಟುಗೂಡಿಸಿದ ಸುಮಾರು 6700 ರೂ.ವನ್ನು ಸಂಘದ ಪರವಾಗಿ ಶಿವಪ್ಪ ಪೂಜಾರಿರವರಿಗೆ ಹಸ್ತಾಂತರಿಸಲಾಯಿತು.


ಸಂಘದ ಅಧ್ಯಕ್ಷ ತಾರನಾಥ ಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಬೆಳ್ಳಿಹಬ್ಬದ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜಾ ಮೊಟ್ಟೆತ್ತಡ್ಕ, ಸದಸ್ಯರಾದ ರಾಧಾಕೃಷ್ಣ, ಪ್ರಕಾಶ್ ಪಂಜಳ ಮತ್ತು ಮಹಮ್ಮದ್ ಸಿದ್ದಿಕ್ ಮಡಿಕೇರಿಯವರು ಶಿವಪ್ಪ ಪೂಜಾರಿಯವ ಮನೆಗೆ ತೆರಳಿ ಧನಸಹಾಯ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here