ಪುತ್ತೂರು: ಶ್ರೀ ಮರಾಠ ಗಣೇಶ್ ಉತ್ಸವ್ ಮಂಡಲ್ ಇದರ ವತಿಯಿಂದ ನಡೆಯಲಿರುವ 9ನೇಯ ವರುಷದ ಗಣೇಶೋತ್ಸವ ಪ್ರಯುಕ್ತ ಗಣೇಶನ ವಿಗ್ರಹ ರಚನೆಗೆ ಮುಹೂರ್ತ ಕಾರ್ಯಕ್ರಮ ಜು.8 ರಂದು ಇಲ್ಲಿನ ಪರ್ಲಡ್ಕದಲ್ಲಿ ನಡೆಯಿತು.
ವಿಗ್ರಹ ರಚನೆಕಾರ ತಾರನಾಥ ಪರ್ಲಡ್ಕ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ, ವಿಗ್ರಹ ರಚನೆಗೆ ಚಾಲನೆ ನೀಡಿದರು.
ಸಮಿತಿಯ ಅಧ್ಯಕ್ಷರೂ, ಕೋರ್ಟುರಸ್ತೆ ಶ್ರೀ ದುರ್ಗಾಲಕ್ಷ್ಮೀ ಜ್ಯುವೆಲ್ಲರಿ ಮಾಲಕ ಶಿವಾಜಿ ಸುರ್ವೆ, ಉಪಾಧ್ಯಕ್ಷ ಬಾಲಾಜಿ ಎಂಟರ್ಪ್ರೈಸ್ ನ ಯುವರಾಜ್ ಬೋಸಲೆ, ಆಶಿರ್ವಾದ ಜ್ಯುವೆಲ್ಲರ್ಸ್ ಮಾಲಕ
ಮಾಧವ ಘೋಡಕೆ, ಮಾನಕ ಜ್ಯವೆಲ್ಲರ್ಸ್ ನ ಸಹದೇವ್ ಕುಂಧಾರೇ, ನ್ಯೂ ಮಾನಕ ಜ್ಯುವೆಲ್ಲರ್ಸ್ ನ ಸಹದೇವ್ ಕಂಧಾರೇ, ಚಂದ್ರಕಾಂತ ಜಾಧವ್, ಸಂಬಾಜೀ ಸುರ್ವೆ, ಸುಜಿತ್ ಪವಾರ್, ಆದಿಕ ಕಧಮ್, ಚಂದ್ರಕಾಂತ ಕಾರಾಡೆ, ಇಂದುರಾವ್ ಬೋಸಲೇ, ವಿಜಯ್ ಸುರ್ವೆ, ಶಿವಾಜಿ ಬಾಬರ್, ಪಾಂಡುರಂಗ್ ಕುಬಾರ್, ರಾಹುಲ್ ಯಾದವ್, ಅಂಕುಷ್ ಗಾಯಕವಾಡ, ಶುಂಭಮ ಕುಬಾರ್ ಹಾಗೂ ಕಿರಣ್ ಶೆಂದೆ ಮೊದಲಾದವರು ಹಾಜರಿದ್ದರು.